ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕವಿ, ಲೇಖಕ ಕಾವ್ಯ ಬೈರಾಗಿ (ಶ್ರೀರಾಜ್ ವಕ್ವಾಡಿ) ಅವರ ಐದನೇ ಕೃತಿ ‘ಅತ್ತ ನಕ್ಷತ್ರ’ ನೀಳ್ಗತೆ ಪುಸ್ತಕ ಬಿಡುಗಡೆ ಸಮಾರಂಭ ಆಗಸ್ಟ್ 20ರ ಆದಿತ್ಯವಾರ ಮಧ್ಯಾಹ್ನ 2:30ಕ್ಕೆ ಪುಸ್ತಕ ಪ್ರಕಾಶಿಸಿದ ಕುಂದಾಪುರದ ಜನಪ್ರತಿನಿಧಿ ಕಛೇರಿಯಲ್ಲಿ ಜರುಗಲಿದೆ.
ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆಯ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕೃತಿ ಬಿಡುಗಡೆ ಮಾಡಲಿದ್ದಾರೆ. ಕವಿ, ಸಾಹಿತಿ ರಾಜ್ ಆಚಾರ್ಯ ಪುಣೆ, ಪ್ರಕಾಶಕರಾದ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ಮೈಸೂರು ವಿದ್ಯಾವರ್ಧಕ ಕಾನೂನು ಕಾಲೇಜಿನ ಉಪನ್ಯಾಸಕಿ ಕೀರ್ತಿ ಭಟ್ ಕೃತಿ ಪರಿಚಯಿಸಲಿದ್ದಾರೆ.
ಕೃತಿ ಬಿಡುಗಡೆ ಕಾರ್ಯಕ್ರಮದ ಬಳಿಕ ಕೃತಿಯ ಲೇಖಕರೊಂದಿಗೆ “ಅತ್ತ ನಕ್ಷತ್ರ : ಮಾತು ಕಥೆ” ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಲೇಖಕಿ ಪೂರ್ಣಿಮಾ ಕಮಲಶಿಲೆ, ಪತ್ರಕರ್ತ ನಿಝಾಮ್ ಅನ್ಸಾರಿ, ಉಪನ್ಯಾಸಕಿಯರಾದ ಅಮೃತಾ ಕುಂದಾಪುರ, ವಿನಯಾ ಶೆಟ್ಟಿ ಕೌಂಜೂರು ಭಾಗವಹಿಸಲಿದ್ದಾರೆ. ಪ್ರಕಟಣೆ ತಿಳಿಸಿದೆ.

