ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದುಡಿಯುವ ಪ್ರತಿಯೊಬ್ಬರೂ ಕುಟುಂಬದ ಆಧಾರವಾಗಿರುತ್ತಾರೆ. ಪ್ರತಿಯೊಬ್ಬರ ಜೀವವೂ ಅಮೂಲ್ಯವಾದುದು. ಹಾಗಾಗಿ ನಮ್ಮ ಅಜಾಗರೂಕತೆಯಿಂದ ಕುಟುಂಬ ಸದಸ್ಯರಿಗೆ ನೋವು ನೀಡುವ ಬದಲಿಗೆ ಕಡಲಿಗೆ ಇಳಿಯುವಾಗ ಲೈಫ್ ಜಾಕೆಟ್, ರಸ್ತೆಯಲ್ಲಿ ತೆರಳುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಸೋಮವಾರ ಬೈಂದೂರು ಶಾಸಕರ ಕಛೇರಿಯಲ್ಲಿ ಮೀನುಗಾರಿಕಾ ಇಲಾಖೆಯಿಂದ ಉಚಿತವಾಗಿ ಒದಗಿಸಲಾದ ಲೈಫ್ ಜಾಕೆಟ್ ಹಾಗೂ ರೀಲ್ಗಳನ್ನು ಮೀನುಗಾರರಿಗೆ ವಿತರಿಸಿ ಮಾತನಾಡಿ, ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುವಾಗ ಲೈಫ್ ಜಾಕೇಟ್ ತೊಂದರೆಯಾಗುತ್ತದೆ ಎಂಬಿತ್ಯಾದಿ ಕಾರಣ ನೀಡುವ ಬದಲಿಗೆ ನಮ್ಮ ರಕ್ಷಣೆಗೆ ಮೊದಲ ಆದ್ಯತೆ ನೀಡುವುದು ಮುಖ್ಯ. ಕನಿಷ್ಠಪಕ್ಷ ಕಡಲಿಗೆ ಹೊರಡುವ ಹಾಗೂ ಹಿಂದಿರುಗುವ ಸಂದರ್ಭವಾದರೂ ಲೈಫ್ ಜಾಕೆಟ್ ಧರಿಸುವುದು ಮುಖ್ಯ ಎಂದ ಅವರು ಮೀನುಗಾರಿಕಾ ಇಲಾಖೆಯಲ್ಲಿದೇ ದಾನಿಗಳಿಂದಲೂ ಲೈಫ್ ಜಾಕೆಟ್ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಈ ವೇಳೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ವಿವೇಕ್, ಉಪ ನಿರ್ದೇಶಕರಾದ ಅಂಜನದೇವಿ, ಸಹಾಯಕ ನಿರ್ದೇಶಕರಾದ ಸುಮಲತಾ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಉದಯ ಮರವಂತೆ ಉಪಸ್ಥಿತರಿದ್ದರು.