Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಶಾಲೆಗೆ ನಿರಂತರ ಗೈರಾಗುತ್ತಿದ್ದ ಶಿಕ್ಷಕ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮಾನತು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಾಲೆಗೆ ನಿರಂತರವಾಗಿ ಗೈರಾಗುತ್ತಿದ್ದ ಆನಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಹಾಗೂ ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿಯನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ ಅವರು ಆದೇಶಿಸಿದ್ದಾರೆ.

ಶಿಕ್ಷಕ ಅಂಪಾರು ದಿನಕರ ಶೆಟ್ಟಿ ಶಾಲೆಗೆ ಬರುತ್ತಿಲ್ಲ ಮತ್ತು ಇದರಿಂದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಸ್ಥಳೀಯರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟ ನೀಡಿದಾಗ ಶಿಕ್ಷಕ ಶಾಲೆಯಲ್ಲಿ ಇರದೇ, ಹಾಜರಿಯನ್ನೂ ಹಾಕದೇ, ಮೇಲಧಿಕಾರಿಗಳ ಗಮನಕ್ಕೂ ತಾರದೇ ಗೈರಾಗಿರುವುದು ಕಂಡು ಬಂದಿತ್ತು. ಇದರ ಆಧಾರದಲ್ಲಿ ಕರ್ತವ್ಯಲೋಪವೆಸಗಿದ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಮೇಲಧಿಕಾರಿಗಳ ಅನುಮತಿ ಪಡೆಯದೆ ಅನಧಿಕೃತವಾಗಿ ನಿರಂತರ ಹಾಗೂ ಗೈರಾಗುತ್ತಿದ್ದ ದಿನಕರ ಶೆಟ್ಟಿ ಹಾಗೂ ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡದೇ ಶಿಕ್ಷಕ ದಿನಕರ ಶೆಟ್ಟಿಗೆ ಬೆಂಬಲ ನೀಡಿದ ಕಾರಣಕ್ಕೆ ಶಾಲೆಯ ಮುಖ್ಯೋಪಾದ್ಯಾಯ ಜನಾರ್ದನ ಪಟಗಾರ್ ಅವರನ್ನೂ ಅಮಾನತುಗೊಳಿಸಲಾಗಿದೆ.

Exit mobile version