ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪರಸ್ಪರ ವಿಚಾರ, ಯೋಜನೆಗಳ ವಿನಿಮಯದಿಂದ ರೋಟರಿ ಕ್ಲಬ್‌ಗಳಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆ ನೆಲೆಯಲ್ಲಿ ಜಂಟಿ ಸಭೆ ನಮ್ಮ ವಿಚಾರ, ಸಂಸ್ಕೃತಿ ವಿನಿಮಯದ ವೇದಿಕೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಭಟ್ಕಳ ರೋಟರಿ ಕ್ಲಬ್ ಅಧ್ಯಕ್ಷ ಡಾ. ಎಂ.ಎ. ಭಾವಿಕಟ್ಟಿ ಹೇಳಿದರು.

ಅವರು ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ರೋಟರಿ ಕ್ಲಬ್ ಬೈಂದೂರು ಹಾಗೂ ರೋಟರಿ ಕ್ಲಬ್ ಭಟ್ಕಳದ ಅಂತರ್ಜಿಲ್ಲಾ ಜಂಟಿ ಸಭೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಝೋನ್ 1ರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ ಮಾತನಾಡಿ, ರೋಟರಿ ಚಟುವಟಿಕೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರವೇ ರೋಟರಿ ಆಪ್ತವಾಗುತ್ತದೆ ಹಾಗೂ ಉತ್ತಮ ಸ್ನೇಹ ಸಂಬಂಧಗಳು ಬೆಳೆಯುತ್ತದೆ ಎಂದರು.
ಊಭಯ ರೋಟರಿ ಕ್ಲಬ್ಗಳ ಧ್ವಜ ವಿನಿಯಮ ಮಾಡಿಕೊಳ್ಳಲಾಯಿತು. ಕಾರ್ಯದರ್ಶಿಗಳು ಮಾಸಿಕ ವರದಿಯ ವಾಚಿಸಿದರು.
ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಪೂರ್ವಾಧ್ಯಕ್ಷ ಶ್ರೀಧರ್ ಭಟ್ ಅತಿಥಿಗಳಾಗಿದ್ದರು. ಭಟ್ಕಳ ರೋಟರಿ ಕಾರ್ಯದರ್ಶಿ ಶ್ರೀನಾಥ ಎಸ್. ಪೈ., ಬೈಂದೂರು ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಉಪಸ್ಥಿತರಿದ್ದರು.
ರಾಘವೇಂದ್ರ ಉಡುಪ ಪ್ರಾರ್ಥಿಸಿ, ಮಂಗೇಶ್ ಶ್ಯಾನುಭೋಗ್, ಮೋಹನ್ ರೇವಣ್ಕರ್ ನುಡಿಗಳನ್ನಾಡಿದರು. ಬೈಂದೂರು ರೋಟರಿ ಅಧ್ಯಕ್ಷ ಪ್ರಸಾದ್ ಪ್ರಭು ಸ್ವಾಗತಿಸಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ ವಂದಿಸಿದರು.