Kundapra.com ಕುಂದಾಪ್ರ ಡಾಟ್ ಕಾಂ

ಆನಗಳ್ಳಿ ಗ್ರಾ.ಪಂ: ಅಧ್ಯಕ್ಷರಾಗಿ ಎಚ್.ಕೆ. ಸವಿತಾ ಉಪಾಧ್ಯಕ್ಷರಾಗಿ ಉದಯ ಪೂಜಾರಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಆನಗಳ್ಳಿ ಗ್ರಾಮ ಪಂಚಾಯತ್ನ 2ನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಚ್. ಕೆ. ಸವಿತಾ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ ಆಯ್ಕೆಯಾಗಿದ್ದಾರೆ.

ಆನಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 8 ಸ್ಥಾನಗಳ ಪೈಕಿ 3 ಕಾಂಗ್ರೆಸ್ ಬೆಂಬಲಿತ, 3 ಬಿಜೆಪಿ ಬೆಂಬಲಿತ, 2 ಪಕ್ಷೇತರ ಸದಸ್ಯರಿದ್ದು ಅಧ್ಯಕ್ಷ ಸ್ಥಾನ ಹಿಂ.ವ.ಅ(ಮ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮನ್ಯ ಸ್ಥಾನಕ್ಕೆ ಮೀಸಲಾಗಿತ್ತು.

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ಆಭ್ಯರ್ಥಿಗೆ 4 ಮತ ಮತ್ತು ಬಿಜೆಪಿ ಬೆಂಬಲಿತ ಆಭ್ಯರ್ಥಿ 4 ಮತಗಳನ್ನು ಸಮಬಲವಾಗಿ ಪಡೆದುಕೊಂಡಿದ್ದರು. ಇಬ್ಬರು ಆಭ್ಯರ್ಥಿಗಳಿಗೂ ಸಮಬಲವಾಗಿ ಮತ ಚಲಾವಣೆಯಾದ್ದರಿಂದ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಪ್ರಕ್ರಿಯೆ ಕೈಗೊಂಡಾಗ ಅಧ್ಯಕ್ಷ ಸ್ಥಾನ ಎನ್ನುವುದು ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿ ಎಚ್ ಕೆ ಸವಿತಾ ಇವರ ಪಾಲಾಯಿತು. ಉಪಾಧ್ಯಕ್ಷರಾಗಿ ಉದಯ ಪೂಜಾರಿ ಇವರು ಅವಿರೋಧವಾಗಿ ಆಯ್ಕೆಯಾದರು.

Exit mobile version