Kundapra.com ಕುಂದಾಪ್ರ ಡಾಟ್ ಕಾಂ

ಯಶಸ್ವಿ ಚಂದ್ರಯಾನ – 3ರ ತಂಡದಲ್ಲಿ ಕುಂದಾಪುರದ ಯುವ ವಿಜ್ಞಾನಿ ಆಕಾಶ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತದ ಚಂದ್ರಯಾನ – 3ರ ಮೈಲಿಗಲ್ಲು, ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದ ಸಂಭ್ರಮ ದೇಶದೆಲ್ಲೆಡೆಯೂ ಮನೆಮಾಡಿದೆ. ಈ ವೈಜ್ಞಾನಿಕ ಪರಾಕ್ರಮದ ಹಿಂದೆ ಶ್ರಮಿಸಿದ ಇಸ್ರೋ ವಿಜ್ಞಾನಿಗಳ ಪೈಕಿ, ಕುಂದಾಪುರ ಮೂಲದ ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ತೊಡಗಿಸಿಕೊಂಡಿರುವುದು ಕರಾವಳಿಗರ ಸಂಭ್ರಮ ಹೆಚ್ಚಿಸಿದೆ.

ತಾಲೂಕಿನ ಗುಜ್ಜಾಡಿ ಮಂಕಿ ಕೇಳಾಮನೆಯವರಾದ ಆಕಾಶ್ ಶೆಟ್ಟಿ ಅವರು ಇಸ್ರೋದಲ್ಲಿ ಯುವ ವಿಜ್ಞಾನಿಯಾಗಿದ್ದು, ಚಂದ್ರಯಾನ – 3ರ ಸ್ಪೇಸ್ ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪಿನ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ

ಆಕಾಶ್ ಶೆಟ್ಟಿ ಅವರು ಕೋಟ ವಿವೇಕ ಹೈಸ್ಕೂಲ್‌ನಲ್ಲಿ ಪಿಯುಸಿ, ಬಳಿಕ ಇಂಜಿನಿಯರಿಂಗ್ ಹಾಗೂ ಎಂಟೆಕ್ ಪದವಿ ಪೂರ್ಣಗೊಳಿಸಿ 2015ರಲ್ಲಿ ಇಸ್ರೋಗೆ ಸೇರ್ಪಡೆಗೊಂಡಿದ್ದರು. ಕುಂದಾಪ್ರ ಡಾಟ್ ಕಾಂ

ಪ್ರಸ್ತುತ ಮುರುಡೇಶ್ವರದ ನಿವಾಸಿಯಾಗಿರುವ ಆಕಾಶ್ ಶೆಟ್ಟಿ ಅವರು, ಮಂಕಿ ಕೇಳಾಮನೆ ಪಾರ್ವತಿ ಶೆಟ್ಟಿ ಹಾಗೂ ಕೆರಾಡಿ ಚಪ್ಪರಮಕ್ಕಿ ದಿ. ಅಶೋಕ್ ಶೆಟ್ಟಿ ಅವರ ಪುತ್ರ.

Exit mobile version