Kundapra.com ಕುಂದಾಪ್ರ ಡಾಟ್ ಕಾಂ

ತಲ್ಲೂರಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 202 ಯೂನಿಟ್ ರಕ್ತ ಸಂಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮೋದಿಕೇರ್ ರಾಕಿಂಗ್ ಚಾಂಪಿಯನ್ಸ್,ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ರೋಟರಿ ಬ್ಲಡ್ ಬ್ಯಾಂಕ್ ಶಿವಮೊಗ್ಗ ಇವರ ಸಹಕಾರದಲ್ಲಿ ಆದಿತ್ಯವಾರ ತಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ತಜ್ಣ ವೈದ್ಯರಾದ ಡಾ ನಾಗೇಶ್ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, 100ಕ್ಕೂ ಅಧಿಕ ವರ್ಷ ಇತಿಹಾಸವಿರುವ ವಿಜ್ಣಾನಕ್ಕೆ ಇಂದಿಗೂ ಕೂಡ ಕೃತಕ ರಕ್ತ ಉತ್ಪಾದನೆ ಮಾಡಲು ಆಗಿಲ್ಲ, ಇಂತಹ ರಕ್ತದಾನ ಶಿಬಿರದಲ್ಲಿ ಆರೋಗ್ಯವಂತರು ರಕ್ತದಾನ ಮಾಡಿದರೆ ಮಾತ್ರ ರೋಗಿಗಳಿಗೆ ಜೀವ ಉಳಿಯಲು ಸಾಧ್ಯ ಎಂದು ಆಭಿಪ್ರಾಯಪಟ್ಟರು.

ಮೋದಿಕೇರ್ ರಾಕಿಂಗ್ ಚಾಂಪಿಯನ್ಸ್ ರವೀಂದ್ರ ಶ್ರೀಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಪಿಎಸ್ಐ ವಿನಯ್, ರೋಟರಿ ಬ್ಲಡ್ ಬ್ಯಾಂಕ್ ಶಿವಮೊಗ್ಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸತೀಶ್, ತಲ್ಲೂರು ಗ್ರಾಮ ಪಂಚಾಯತ್ ಗಿರೀಶ್ ನಾಯಕ್, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದ ಡಾ ಅಜೀಜ್,, ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಅಧ್ಯಕ್ಷರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಉಪಸ್ಥಿತ್ತರಿದ್ದರು.

ಈ ಸಂದರ್ಭದಲ್ಲಿ ರಕ್ತದಾನ ಕ್ಷೇತ್ರದಲ್ಲಿ ಸೇವೆಯನ್ನು ಗುರುತಿಸಿ ದಾಖಲೆಯ ರಕ್ತದಾನ ಶಿಬಿರದ ರೂವಾರಿಗಳಾದ ಶರತ್ ಕಾಂಚನ್ ಆನಗಳ್ಳಿ ಹಾಗೂ ಪ್ರಶಾಂತ್ ತಲ್ಲೂರು ಅವರನ್ನು ಸಮ್ಮಾನಿಸಲಾಯಿತು.

ಭಾಸ್ಕರ್ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಗೌರೀಶ್ ಹಳ್ಳಿಹೊಳೆ ಧನ್ಯವಾದ ಅರ್ಪಿಸಿದರು.ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 202 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Exit mobile version