Kundapra.com ಕುಂದಾಪ್ರ ಡಾಟ್ ಕಾಂ

ಭಾರತದ ಕೊನೆಯ ರಸ್ತೆಯಲ್ಲಿ ‘ಕುಂದಾಪ್ರ’ ಧ್ವಜ ಹಾರಿಸಿದ ಯುವ ಬೈಕರ್‌ಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತದ ಕೊನೆಯ ಭೂಮಿ ಧನುಷ್ಕೋಡಿಗೆ ಬೈಕ್ ಮೂಲಕ ತೆರಳಿದ ಯುವಕರ ತಂಡವೊಂದು ಅಲ್ಲಿನ ಕೊನೆಯ ರಸ್ತೆಯಲ್ಲಿ ಕುಂದಾಪ್ರದ ನಕ್ಷೆಯನ್ನೊಳಗೊಂಡ ಧ್ವಜ ಹಾರಿಸಿ ತಮ್ಮೂರ ಅಭಿಮಾನ ಮೆರೆದಿದ್ದಾರೆ.

ಅಗಸ್ಟ್ 28ರಂದು ಕುಂದಾಪುರದಿಂದ ತೆರಳಿದ್ದ ಬೈಕರ್‌ಗಳಾದ ಸುದರ್ಶನ್ ಹೆಬ್ಬಾರ್, ಕೆ. ಶ್ರೀಹರ್ಷ ಯಡಿಯಾಳ್ ಹಾಗೂ ಗುರುಪ್ರಸಾದ್ ಮಂಜ ಅವರನ್ನೊಳಗೊಂಡ ನಮ್ಮ ಕೆ2ಡಿ ತಂಡವು, ಅ.30ರಂದು ಭಾರತದ ಕೊನೆಯ ರಸ್ತೆ ಧನುಷ್ಕೋಡಿಗೆ ತಲುಪಿದ್ದರು. ಅಲ್ಲಿ ತಮ್ಮ ಪ್ರಯಾಣದ ನೆನಪು ಹಾಗೂ ತಮ್ಮೂರಿನ ಅಭಿಮಾನಕ್ಕಾಗಿ ಕುಂದಾಪುರದ ನಕ್ಷೆಯನ್ನೊಳಗೊಂಡ ಧ್ವಜವನ್ನು ಹಾರಿಸಿದ್ದಾರೆ. ಆರು ದಿನಗಳ ಒಟ್ಟು ಪ್ರಯಾಣದಲ್ಲಿನ ತಮ್ಮ ಅನುಭವವನ್ನು ಕುಂದಾಪ್ರ ಡಾಟ್ ಕಾಂ ಜೊತೆಗೆ ಹಂಚಿಕೊಂಡ ಅವರು, ಇದು ಕುಂದಾಪುರ ಹಾಗೂ ನಮ್ಮ ತಂಡಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದಿದ್ದಾರೆ.

ಧನುಷ್ಕೋಡಿ ರಾಮೇಶ್ವರಂ ದ್ವೀಪದ ಬಳಿಯಿರುವ ದಕ್ಷಿಣದ ತುತ್ತತುದಿಯಲ್ಲಿರುವ ಒಂದು ಗ್ರಾಮವಾಗಿದ್ದು, ರಾಮಸೇತು ನಿರ್ಮಾಣ ಕಾರ್ಯ ಅಲ್ಲಿಂದಲೇ ಆರಂಭವಾಯಿತು ಎಂಬ ಪ್ರತೀತಿ ಇದೆ. ಬಂಗಳಕೊಲ್ಲಿ ಹಾಗೂ ಹಿಂದೂ ಮಹಾ ಸಾಗರ ಸಂಗಮದ ಸ್ಥಳವಾದ ಈ ಪ್ರದೇಶ ಹಿಂದುಗಳ ಪವಿತ್ರ ಭೂಮಿ ಹಾಗೂ ಪ್ರವಾಸಿ ತಾಣವಾಗಿದೆ.

Exit mobile version