Kundapra.com ಕುಂದಾಪ್ರ ಡಾಟ್ ಕಾಂ

ಹೋಲಿಕ್ರಾಸ್ ಇಗರ್ಜಿಯಲ್ಲಿ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಹೋಲಿಕ್ರಾಸ್ ಇಗರ್ಜಿಯಲ್ಲಿ ಮೊಂತಿ ಫೆಸ್ತ್ (ತೆನೆ ಹಬ್ಬ) ಸಂಭ್ರಮದಿಂದ ಆಚರಿಸಲಾಯಿತು.

ಧರ್ಮಗುರು ವಿನ್ಸೆಂಟ್ ಕುವೆಲ್ಲೋ ಹಾಗೂ ಕಟ್ಕೇರಿಯ ಜೋಸ್ವೀ ಡಿಸೋಜಾ ರವರ ನೇತೃತ್ವದಲ್ಲಿ ಬಾಲೆ ಮರಿಯಮ್ಮಳಿಗೆ ಹೂವುಗಳನ್ನು ಅರ್ಪಿಸಿ, ತೆನೆಗಳ ಆಶೀರ್ವಚನ ನಡೆಸಲಾಯಿತು.

ಬಳಿಕ ಮಾತೆಯ ನಾಮಕ್ಕೆ ಸ್ತುತಿಗೀತೆಗಳನ್ನು ಹಾಡುತ್ತಾ ಆಶೀರ್ವಾದಿತ ತೆನೆಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ವಿಶೇಷ ಬಲಿಪೂಜೆಯನ್ನು ನೆರೆವೆರಿಸಿ, ಎಲ್ಲರಿಗೂ ತೆನೆ ಮತ್ತು ಕಬ್ಬುಗಳನ್ನು ವಿತರಿಸಲಾಯಿತು.

Exit mobile version