Site icon Kundapra.com ಕುಂದಾಪ್ರ ಡಾಟ್ ಕಾಂ

ಸೆ.09ರಂದು ಕುಂದಾಪುರದಲ್ಲಿ ಫಿಸಿಯೋಕೇರ್ ಸೆಂಟರ್‌ನ ನೂತನ ಶಾಖೆ ಕಾರ್ಯಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗುಣಮಟ್ಟದ ಸೇವೆಯ ಮೂಲಕ ಹೆಸರಾಗಿರುವ ಉಡುಪಿಯ ಫಿಸಿಯೋಕೇರ್ ಸೆಂಟರ್‌ನ ನೂತನ ಶಾಖೆ ಸೆ.09ರಂದು ಕುಂದಾಪುರದಲ್ಲಿ ಶುಭಾರಂಭಗೊಳ್ಳಲಿದೆ.

ಗಿರಿಜಾ ಹೆಲ್ತ್‌ಕೇರ್‌ ಮತ್ತು ಸರ್ಜಿಕಲ್ಸ್ ಮೂಲಕ ಕುಂದಾಪುರದಲ್ಲಿ ಉತ್ತಮ ಸೇವೆ ನೀಡುತ್ತಿರುವ ಗಿರಿಜಾ ಗ್ರೂಪ್ಸ್‌ನ ಅಂಗಸಂಸ್ಥೆಯಾಗಿರುವ ಫಿಸಿಯೋಕೇರ್ ಸೆಂಟರ್ ಕುಂದಾಪುರದಲ್ಲಿಯೂ ಕಾರ್ಯಾಚರಿಲಿದೆ. ಸೆ.9ರ ಸಂಜೆ 5:30ಕ್ಕೆ ಪಾರಿಜಾತ ಹೋಟೆಲ್ ಎದುರಿನ ಅಥರ್ವ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ.

ಫಿಸಿಯೋಕೇರ್ – ಫಿಸಿಯೋಥೆರಪಿ ಹಾಗೂ ರಿಹ್ಯಾಬಿಲಿಟೆಷನ್ ಸೆಂಟರ್ ಆಗಿದ್ದು, ಅಲ್ಪ ಕಾಲದ ಹಾಗೂ ಧೀರ್ಘ ಕಾಲದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಇದು ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿದ್ದು, ಕುಂದಾಪುರದ ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್‌ನ ಪ್ರವರ್ತಕರು ತಿಳಿಸಿದ್ದಾರೆ.

Exit mobile version