ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಅಧಿ ದೇವರಾದ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಕರಾವಳಿ ಭಾಗದಲ್ಲೇ ಪ್ರಥಮ ಬಾರಿಗೆ ವಾಸುದೇವ ಜೋಯಿಷರ ನೇತೃತ್ವದಲ್ಲಿ 1200ಕ್ಕೂ ಮಿಕ್ಕಿ ಮಹಿಳೆಯರಿಂದ ಸಾಮೂಹಿಕ ಶಿವ ಸಹಸ್ರನಾಮ ಭಸ್ಮಾರ್ಚನೆ ಪೂಜಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ, ಸಮಾಜ ಸೇವಕರಾದ ಸುಬ್ರಹ್ಮಣ್ಯ ಹೊಳ್ಳ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸತೀಶ್ ಶೆಟ್ಟಿ, ವಿಶ್ವನಾಥ್ ಪೂಜಾರಿ ಗರಡಿ ಮನೆ, ನಾಗರಾಜ್ ರಾಯಪ್ಪನ ಮಠ, ಜಯಾನಂದ ಖಾರ್ವಿ, ಸತೀಶ್, ವೀಣಾ ಎಚ್, ಸವಿತ ಜಗದೀಶ್ ಊರಿನ ಪ್ರಮುಖರಾದ ಕಿಶೋರ್ ಹೆಗ್ಡೆ, ಚಂದ್ರಶೇಖರ್ ಕಲ್ಪತರು, ಸಟ್ವಡಿ ವಿಜಯ್ ಶೆಟ್ಟಿ, ರಾಜೀವ ಕೋಟ್ಯಾನ್,ಹೃದಯ ಕುಮಾರ್ ಶೆಟ್ಟಿ, ಮಂಜುನಾಥ್ ರಾವ್, ಜಿ ಎಸ್ ಭಟ್, ಸಚಿನ್ ನಕ್ಕತ್ತಾಯ, ಚಂದ್ರಶೇಖರ್ ಶೆಟ್ಟಿ ಶ್ರವಣ್ ಚಾತ್ರ ಮುಂತಾದವರು ಉಪಸ್ಥಿತರಿದ್ದರು.