Kundapra.com ಕುಂದಾಪ್ರ ಡಾಟ್ ಕಾಂ

ಸೆ.16ರಿಂದ ನಾಗೂರಿನಲ್ಲಿ 2 ದಿನಗಳ ಯಕ್ಷೋತ್ಸವ 2023

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಹಾಗೂ ಕುಂದಾಪ್ರ ಡಾಟ್ ಕಾಂ ಆಶ್ರಯದಲ್ಲಿ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರಲ್ಲಿ ಸೆ.16 ಹಾಗೂ 17ರ ಸಂಜೆ 6:30ರಿಂದ ಯಕ್ಷೋತ್ಸವ ಕಾರ್ಯಕ್ರಮ ಜರುಗಲಿದೆ.

ಕಾಲಮಿತಿ ಯಕ್ಷಗಾನದಲ್ಲಿ ಉಚಿತ ಪ್ರವೇಶವಿದ್ದು, ಸೆ.16ರಂದು ನಾಗಶ್ರೀ ಹಾಗೂ ಸೆ.17ರಂದು ಮಾಗದ ವಧೆ ಪ್ರಸಂಗ ಪ್ರದರ್ಶನ ಜರುಗಲಿದೆ. ಸುಧೀರ್ ಭಟ್ ಗಾನ ಸಾರಥ್ಯದಲ್ಲಿ, ಹಳ್ಳಾಡಿ ದ್ವಿತೇಶ್ ಹಾಸ್ಯದಲ್ಲಿ, ಕಾಂಚನ್, ಶಿಥಲ್, ಯುವರಾಜ್ ಮುಂತಾದ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿ ಯಕ್ಷಗಾನ ಪ್ರದರ್ಶನ ಜರುಗಲಿದೆ ಎಂದು ಮೇಳದ ಸಂಚಾಲಕ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Exit mobile version