Site icon Kundapra.com ಕುಂದಾಪ್ರ ಡಾಟ್ ಕಾಂ

ಸೆ.24ರಕ್ಕೆ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಂಬಳ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ದಿ. ಸುರೇಶ್ ಪೂಜಾರಿ ಕಾಡಿನತಾರು ಅವರ ಸ್ಮರಣಾರ್ಥ, ಬೈಂದೂರು ತಾಲೂಕು ಕಂಬಳ ಸಮಿತಿ ಸಹಯೋಗದೊಂದಿಗೆ 25ನೇ ವರ್ಷದ ಮಿಯ್ಯಾಣಿ ಕಂಬಳೋತ್ಸವ ಸೆ.24ರ  ಬೆಳಿಗ್ಗೆ 10ಗಂಟೆಯಿಂದ, ಮಿಯ್ಯಾಣಿ ಕಾಡಿನತಾರುವಿನಲ್ಲಿ ನಡೆಯಲಿದೆ.

ಹಗ್ಗ ಅತೀ ಕಿರಿ, ಹಗ್ಗ ಕಿರಿಯ, ಹಗ್ಗ ಹಿರಿಯ ಹಾಗೂ ಹಲಗೆ ಮುಕ್ತ ವಿಭಾಗಲ್ಲಿ ಸ್ಪರ್ಧೆ ನಡೆಯಲಿದ್ದು ವಿಜೇತ ಕೋಣಗಳಿಗೆ ಹಾಗೂ ಕೋಣ ಓಡಿಸುವವರಿಗೆ ಬಹುಮಾನ ನೀಡಲಾಗುತ್ತದೆ. ಈ ಕಂಬಳೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಯೋಜಕ ಸಂತೋಷ್ ಪೂಜಾರಿ ಕಾಡಿನಾರು ತಿಳಿಸಿದ್ದಾರೆ.

Exit mobile version