Site icon Kundapra.com ಕುಂದಾಪ್ರ ಡಾಟ್ ಕಾಂ

ಸದ್ಗುರು ಜಗಜೀತ್ ಸಿಂಗ್ ಸಂಗೀತ ಸ್ಪರ್ಧೆ: ಕೇದಾರ್ ಮರವಂತೆ ದ್ವಿತೀಯ ಸುತ್ತಿಗೆ ತೇರ್ಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪಂಜಾಬ್ ರಾಜ್ಯದ ಲುಧಿಯಾನದ ಶ್ರೀ ಬೈನಿ ಸಾಹಿಬ್ ಗುರುದ್ವಾರ ನಡೆಸುವ ರಾಷ್ಟ್ರೀಯ ಮಟ್ಟದ ಹಿಂದುಸ್ಥಾನಿ ಖಯಾಲ್ ಗಾಯಕಿ ಸಂಗೀತ ಸ್ಪರ್ಧೆಯ ಕಿರಿಯರ ವಿಭಾಗದ ಆನ್ಲೈನ್ ಪ್ರಥಮ ಸುತ್ತಿನಲ್ಲಿ ಯಶಸ್ವಿಯಾದ ಕೇದಾರ್ ಮರವಂತೆ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಈ ಸುತ್ತಿನ ಸ್ಪರ್ಧೆಯು ನವದೆಹಲಿ, ಕೊಲ್ಕತ್ತಾ, ಪುಣೆಯಲ್ಲಿ ನಡೆಯಲಿದ್ದು ಕೇದಾರ್, ನವಂಬರ್ 4 ಮತ್ತು 5ರಂದು ಪುಣೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಆಮಂತ್ರಿತರಾಗಿದ್ದಾರೆ.

ಕೇದಾರ್ ಮರವಂತೆ ಗುರು ಬಿ. ರಾಘವೇಂದ್ರ ಉಪಾಧ್ಯಾಯರ ಬಳಿ ಆರಂಭಿಕ ಸಂಗೀತ ಕಲಿಕೆ ನಡೆಸಿದ್ದು, ಆ ಬಳಿಕ ೮ ವರ್ಷಗಳಿಂದ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ ಅವರಿಂದ ಸಂಗೀತ ಅಭ್ಯಾಸ ನಡೆಸುತ್ತಿದ್ದಾರೆ. ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಕೇದಾರ್, ಸಂಗೀತಾಸಕ್ತ ದಂಪತಿ ಜತೀಂದ್ರ ಮರವಂತೆ-ಡಾ. ರೂಪಶ್ರೀ ದಂಪತಿಯ ಪುತ್ರ.

► ಅಂತರ್ ಕಾಲೇಜು ಭಕ್ತಿಗೀತೆ ಸ್ಪರ್ಧೆ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕೇದಾರ್ ಮರವಂತೆಗೆ ದ್ವಿತೀಯ ಸ್ಥಾನ – https://kundapraa.com/?p=69263 .

Exit mobile version