Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ದಂಪತಿಗಳು ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿದ್ಯುತ್ ತಂತಿ ತಗುಲಿ ದಂಪತಿಗಳು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಕಟ್ ಬೆಲ್ತೂರು ಗ್ರಾಮದ ಸುಳ್ಸೆ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಘಟನೆಯಲ್ಲಿ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55) ಹಾಗೂ ಅವರ ಪತ್ನಿ ಲಕ್ಷ್ಮೀ ದೇವಾಡಿಗ (49) ದಂಪತಿಗಳು ಮೃತಪಟ್ಟಿದ್ದಾರೆ.

ಮಹಾಬಲ ದೇವಾಡಿಗ ಅವರು ದಿನಗೂಲಿ ಕಾರ್ಮಿಕರಾಗಿದ್ದು ಸುಳ್ಸೆ ಕರಣಿಕರ ಮನೆಯ ಬಳಿಯ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಹಾಬಲ ದೇವಾಡಿಗ ಅವರು ಸಮಯಕ್ಕೆ ಸರಿಯಾಗಿ ಮನೆಗೆ ಬಾರದ್ದರಿಂದ ಅನುಮಾನಗೊಂಡ ಪತ್ನಿ ಲಕ್ಷ್ಮೀ ದೇವಾಡಿಗ ಅವರು, ಪತಿ ನಿತ್ಯವೂ ಬರುತ್ತಿದ್ದ ಕಾಲುದಾರಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಹಾಬಲ ಅವರಿಗೆ ವಿದ್ಯುತ್ ತಂತಿ ತಗುಲಿ ಬಿದ್ದರುವುದನ್ನು ಗಮನಿಸಿದ ಪತ್ನಿಯು, ಪತಿಯನ್ನು ರಕ್ಷಿಸಲು ಕೂಗಾಡಿದ್ದಾರೆ. ಅಲ್ಲಿಯೇ ಬಿದ್ದಿದ್ದ ಮರದ ತುಂಡನ್ನು ಹಿಡಿದು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಅದು ನೀರು ಬಿದ್ದು ಒದ್ದೆಯಾಗಿದ್ದರಿಂದ ಅವರಿಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ./ ಕುಂದಾಪ್ರ ಡಾಟ್ ಕಾಂ/

ಸುಳ್ಸೆಯವರಾದ ಮಹಾಬಲ ದೇವಾಡಿಗ ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಸೌಕೂರಿನ ಪತ್ನಿಯ ಮನೆಯಲ್ಲಿ ವಾಸವಿದ್ದು, ಪ್ರತಿದಿನ ಸುಳ್ಸೆ ಯಕ್ಷೀ ಬ್ರಹ್ಮ ನಂದೀಕೇಶ್ವರ ದೈವಸ್ಥಾನದಲ್ಲಿ ಪೂಜೆಗಾಗಿ ಬರುತ್ತಿದ್ದರು. ದಂಪತಿಗಳಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ. /ಕುಂದಾಪ್ರ ಡಾಟ್ ಕಾಂ/

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ್ ಗೌಡ, ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Exit mobile version