Kundapra.com ಕುಂದಾಪ್ರ ಡಾಟ್ ಕಾಂ

ಸಿದ್ದಾಪುರದಲ್ಲಿ ಶ್ರೀ ಬ್ರಾಹೀ ಗ್ರಾಮೀಣ ವಿಕಾಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಿದ್ಧಾಪುರ:
ಇಲ್ಲಿನ ಕಡ್ರಿ ಕಾಂಪ್ಲೆಕ್ಸ್ನಲ್ಲಿ ಶ್ರೀ ಬ್ರಾಹ್ಮಿ ಗ್ರಾಮೀಣ ವಿಕಾಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆಗೊಂಡಿತು.

ಕಮಲಶಿಲೆ ದೇವಳದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ನೂತನ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿ, ‘ಒಳ್ಳೆಯ ಉದ್ದೇಶಕ್ಕೆ ಸಾಲ ಸೌಲಭ್ಯ ವಿತರಿಸುವ ಮೂಲಕ ಜನರ ಏಳಿಗೆಗೆ ಸಹಕರಿಸುವ ಸಹಕಾರಿ ಸಂಸ್ಥೆಯಾಗಲಿ ಎಂದು ಹೇಳಿದರು.

ಲಾಕರ್ ಉದ್ಘಾಟಿಸಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ಸಹಕಾರಿ ಸಂಸ್ಥೆಗಳು ಸಮಾಜ ಕಟ್ಟುವ ಸಂಸ್ಥೆಗಳು, ಸಂಸ್ಥೆಯಿಂದ ರೈತಾಪಿ ಕುಟುಂಬಗಳ ಅಭಿವೃದ್ಧಿಗೆ ಸಾಲ ಸೌಲಭ್ಯ ನೀಡುವ ಮೂಲಕ ಗ್ರಾಮೀಣದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದರು.

ಕ್ಯಾಂಪೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಪಾಸ್ ಪುಸ್ತಕ ಬಿಡುಗಡೆಗೊಳಿಸಿದರು. ಮಾನಂಜೆ ವಿಎಸ್ಎಸ್ ಅಧ್ಯಕ್ಷ ಶಂಕರನಾರಾಯಣ ಯಡಿಯಾಳ ಸಾಲ ಪತ್ರ ಬಿಡುಗಡೆಗೊಳಿಸಿದರು. ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ಎ. ಕಂಪ್ಯೂಟರ್ ಹಾಗೂ ಸಂಪಿಗೇಡಿ ಸಂಜೀವ ಶೆಟ್ಟಿ ಸ್ವಸಹಾಯ ಗುಂಪು ಉದ್ಘಾಟಿಸಿದರು.

ಸಿದ್ದಾಪುರ ಗ್ರಾಪಂ ಅಧ್ಯಕ್ಷೆ ಲತಾ ಶೆಟ್ಟಿ, ಕೋಟೇಶ್ವರ ಪಿಎಸ್ಎಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಉದ್ಯಮಿ ಡಿ. ಗೋಪಾಲಕೃಷ್ಣ ಕಾಮತ್, ಶ್ರೀಕಾಂತ್ ನಾಯಕ್ ಸಿದ್ದಾಪುರ, ಡಾ.ಜಗದೀಶ್ ಶೆಟ್ಟಿ ಸಿದ್ದಾಪುರ, ದಿನಕರ್ ಉಡುಪ, ಎ.ಚಂದ್ರಶೇಖರ್ ಶೆಟ್ಟಿ ಹೆನ್ನಾಬೈಲ್, ಭೋಜರಾಜ್ ಶೆಟ್ಟಿ ಕಡಿ, ಸತೀಶ್ ಶೆಟ್ಟಿ ಕಡಿ, ಶ್ರೀ ಬ್ರಾಹೀ ಗ್ರಾಮೀಣ ವಿಕಾಸ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋಪಾಲ ರಾಮ ಪೂಜಾರಿ, ಉಪಾಧ್ಯಕ್ಷೆ ರಮ್ಯಾ, ಸಿಇಒ ಗೋಪಾಲ್ ಎನ್. ಪೂಜಾರಿ, ಶಾಖಾ ವ್ಯವಸ್ಥಾಪಕ ಸತೀಶ್ ಪೂಜಾರಿ, ನಿರ್ದೇಶಕರು ಉಪಸ್ಥಿತರಿದ್ದರು.

ಸಿಇಒ ಗೋಪಾಲ ಪೂಜಾರಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ಸತೀಶ್ ಪೂಜಾರಿ ವಂದಿಸಿದರು.

Exit mobile version