ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ ಹಾಲಾಡಿ ಶಂಕರನಾರಾಯಣ ಘಟಕ ದ ವತಿಯಿಂದ ಮೊಗವೀರ ಸಮಾಜದ ಮಾರ್ಗದರ್ಶಕರಾದ ನಾಡೋಜ ಡಾ. ಜಿ. ಶಂಕರ್ ಅವರ 68ನೇ ಹುಟ್ಟುಹಬ್ಬದ ಪ್ರಯುಕ್ತ ವಾಗ್ಜೋತಿ ಶ್ರವಣ ದೋಷವುಳ್ಳ ಅಂಧ ಮಕ್ಕಳ ವಸತಿ ಶಾಲೆ ಮೂಡುಬಗೆ ಅಂಪಾರು ಇಲ್ಲಿನ ಮಕ್ಕಳಿಗೆ ಮದ್ಯಾಹ್ನ ಊಟ ಮತ್ತು ಸಿಹಿ ತಿಂಡಿ ವಿತರಿಸಿ ಕೇಕ್ ಕಟ್ ಮಾಡಿ ಆಚರಿಸಲಾಯಿತು.
ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆಯ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ನಿಕಟಪೂರ್ವ ಅಧ್ಯಕ್ಷರಾದ ಶಿವರಾಮ್ ಕೆ. ಕೋಟ, ಪ್ರಧಾನ ಕಾರ್ಯದರ್ಶಿ ರವೀಶ್ ಎಸ್. ಕೊರವಡಿ, ಉಪಾಧ್ಯಕ್ಷರಾದ ಜಯಂತ್ ಅಮೀನ್, ಮಾಜಿ ಅಧ್ಯಕ್ಷರು ಗಣೇಶ್ ಕಾಂಚನ್, ಅಶೋಕ್ ತೆಕ್ಕಟ್ಟೆ, ಘಟಕ ದ ಅಧ್ಯಕ್ಷರಾದ ಕ್ರಷ್ಣ ಮೂರ್ತಿ ಕಾಂಚನ್, ನಿಕಟ ಪೂರ್ವ ಅಧ್ಯಕ್ಷರಾದ ಶೇಖರ್ ತೋಳರ್, ಕಾರ್ಯದರ್ಶಿ ಯಾದ ಶರತ್ ಮೊಗವೀರ ಸೌಡ, ಗೌರವ ಸಲಹೆಗರಾ ದ ರಘುರಾಮ್ ಹುಣಸೆಮಕ್ಕಿ, ಶಾಲಾ ಸಹ ಮುಖ್ಯಪಾಧ್ಯಾಯರಾದ ಸತ್ಯ ಪ್ರಸನ್ನ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಅಂಪಾರು, ವನಜ ಬೈಲೂರು, ಮತ್ತು ಮೊಗವೀರ ಯುವ ಸಂಘಟನೆ ಹಾಲಾಡಿ ಶಂಕರನಾರಾಯಣ ಘಟಕದ ಪದಾಧಿಕಾರಿಗಳು ಮತ್ತು ಜಿಲ್ಲಾ ಸಂಘಟನೆ ಯ ಪದಾಧಿಕಾರಿಗಳು ಮತ್ತು ಶಾಲಾ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.

