ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಾಕೃತಿಕ ದುರಂತದ ಸಮಯದಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿ ತುರ್ತು ಸಂದೇಶ ನೀಡುವ ಸಲುವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ ಪ್ರಯೋಗಾರ್ಥ ಪರೀಕ್ಷೆ ನಡೆಸಿದ್ದು, ಅ.12ರ ಬೆಳಿಗ್ಗೆ 11:45ರ ವೇಳೆಗೆ ಕರ್ನಾಟಕದ ಬಹುಪಾಲು ಸಾರ್ವಜನಿಕರಿಗೆ ಈ ಸಂದೇಶ ಸ್ವೀಕಾರವಾಗಿದೆ.
ಇಂದು ಪ್ರಾಯೋಗಿಕವಾಗಿ ಪಾಪ್-ಅಪ್ ಅಧಿಸೂಚನೆಯು ಫ್ಲ್ಯಾಷ್ ಮೆಸೆರೂ ರೂಪದಲ್ಲಿ ಬಂದಿದ್ದು ವಿಭಿನ್ನ ಎಚ್ಚರಿಕೆಯ ಶಬ್ದವನ್ನೂ ಒಳಗೊಂಡಿತ್ತು. ಗೊಂದಲ ತಪ್ಪಿಸಲು ಮಾದರಿ ಪರೀಕ್ಷಾ ಸಂದೇಶ” ಎಂದು ಸ್ಪಷ್ಟವಾಗಿ ಲೇಬಲಿನಲ್ಲಿ ಸೂಚಿಸಲಾಗಿತ್ತು. ಪ್ರಾಕೃತಿಕ ವಿಪತ್ತುಗಳ ಸಮಯದಲ್ಲಿ ತುರ್ತು ಸಂವಹನವನ್ನು ಹೆಚ್ಚಿಸಲು ಮತ್ತು ನಮ್ಮ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ದೂರಸಂಪರ್ಕ ಇಲಾಖೆಯು ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯನ್ನು ನಡೆಸುತ್ತಿರುವುದನ್ನು ಖಚಿತಪಡಿಸಲಾಗಿದೆ.
ಸೆಲ್ ಬ್ರಾಡ್ಕಾಸ್ಟ್ ಎಚ್ಚರಿಕೆ ವ್ಯವಸ್ಥೆಯು ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಗೊತ್ತುಪಡಿಸಿದ ಭೌಗೋಳಿಕ ಪ್ರದೇಶದ ಎಲ್ಲಾ ನಿವಾಸಿಗಳ ಮೊಬೈಲ್ ಸಾಧನಗಳಿಗೆ ವಿಪತ್ತಿಗೆ ಸಂಬಂಧಿಸಿದಂತೆ ನಿರ್ಣಾಯಕ ಮತ್ತು ಸೂಕ್ಷ್ಮ ಸಂದೇಶಗಳ ಜೊತೆಗೆ ನಿಗದಿತ ಸಮಯವನ್ನೂ ಕಳುಹಿಸಲು ಸಹಾಯವಾಗಿದೆ. ಪ್ರಮುಖ ತುರ್ತು ಮಾಹಿತಿಯು ಸಕಾಲಿಕವಾಗಿ ಸಾಧ್ಯವಾದಷ್ಟು ಜನರನ್ನು ತಲುಪುತ್ತದೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಉದಾಹರಣೆಗೆ ತೀವ್ರ ಹವಾಮಾನ ಎಚ್ಚರಿಕೆಗಳಾದ ಸುನಾಮಿ, ಫ್ಲ್ಯಾಶ್ ಫ್ಲಡ್, ಭೂಕಂಪನಗಳ ಬಗ್ಗೆ ಮಾಹಿತಿ ನೀಡಲಿದೆ.
ವಿವಿಧ ಮೊಬೈಲ್ ಆಪರೇಟರ್ಗಳು ಮತ್ತು ಸೆಲ್ ಬ್ರಾಡ್ಕಾಸ್ಟ್ ಸಿಸ್ಟಮ್ಗಳ ತುರ್ತು ಎಚ್ಚರಿಕೆಯ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಅಳೆಯಲು ಈ ಪರೀಕ್ಷೆಗಳನ್ನು ಕಾಲಕಾಲಕ್ಕೆ ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಈ ಪ್ರಯತ್ನದ ಭಾಗವಾಗಿ, ಕರ್ನಾಟಕದಲ್ಲಿ ಅಕ್ಟೋಬರ್ 12 ರಂದು ಪರೀಕ್ಷೆಗಳನ್ನು ನಡೆಸುವ ಬಗ್ಗೆ ತಿಳಿಸಲಾಗಿತ್ತು.
ಸಂದೇಶದಲ್ಲಿ ಹೀಗಿದೆ:
“ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ.“ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ TEST ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.