Kundapra.com ಕುಂದಾಪ್ರ ಡಾಟ್ ಕಾಂ

ಭಾರತದ ಅತ್ಯಂತ ವೇಗದ ಓಟಗಾರ ದಾಖಲೆ ಬರೆದ ಮಣಿಕಂಠ ಹೋಬಳಿದಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿದ್ದ ಮಣಿಕಂಠ ಹೋಬಳಿದಾರ್ ಅವರು, 100ಮೀ ಓಟದಲ್ಲಿ ಭಾರತದ ಅತ್ಯಂತ ವೇಗದ ಓಟಗಾರರಾಗಿ ದಾಖಲೆ ಮಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

100ಮೀ. ಓಟದ ಸೆಮಿಫೈನಲ್‌ನಲ್ಲಿ 10.23 ಸೆಕೆಂಡುಗಳಲ್ಲಿ ಓಡಿ ರಾಷ್ಟ್ರೀಯ ದಾಖಲೆ ಬರೆದಿದ್ದ 21 ವರ್ಷದ ಮಣಿಕಂಠ, 2015ರಲ್ಲಿ ಒಡಿಶಾದ ಅಮಿಯಾ ಕುಮಾರ್ ಮಲ್ಲಿಕ್ 10.26 ಸೆಕೆಂಡುಗಳಲ್ಲಿ ಓಡಿದ್ದ ರಾಷ್ಟ್ರೀಯ ದಾಖಲೆ ಮುರಿದರು. ರಾಷ್ಟ್ರೀಯ ದಾಖಲೆಯೊಂದಿಗೆ ಗುರುವಾರ ನಡೆದ ಫೈನಲ್ನಲ್ಲಿಯೂ ಕೂಡ ಕೇವಲ 10.42 ಸೆಕೆಂಡ್ಗಳಲ್ಲಿ ಓಟ ಮುಗಿಸಿದ ಮಣಿಕಂಠ ಅಗ್ರಸ್ಥಾನದೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು.

ಬೈಂದೂರು ಪಡುವರಿಯ ಮಂಜುನಾಥ ಹೋಬಳಿದಾರ್ ಹಾಗೂ ದಿ. ಸುಂದರಿ ಅವರ ಪುತ್ರರಾದ ಮಣಿಕಂಠ ಅವರು 2020ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಥ್ಲೆಟಿಕ್ಸ್ನಲ್ಲಿ ವಿವಿಧ ಪದಕ ಗಳಿಸಿದ್ದಾರೆ.

Exit mobile version