Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಉಚಿತ ಹೃದಯ & ಕ್ಯಾನ್ಸರ್ ತಪಾಸಣಾ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರೋಟರಿ ಕ್ಲಬ್ ಬೈಂದೂರು ನೇತೃತ್ವದಲ್ಲಿ ಜೆ ಸಿ ಐ ಉಪ್ಪುಂದ, ಫ್ರೆಂಡ್ಸ್ ಕ್ಲಬ್ ಉಪ್ಪುಂದ, ಜೇಸಿಐ ಬೈಂದೂರು ಸಿಟಿ, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜ ಸಂಘ (ರಿ), ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಉಪ್ಪುಂದ , ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಟ್ರಸ್ಟ್ ರಿ ಉಪ್ಪುಂದ, ಆನೆ ಗಣಪತಿ ಆಟೋ ರಿಕ್ಷಾ ಮಾಲಕ ಚಾಲಕರ ಸಂಘ ಅಂಬಾಗಿಲು , ಆಸರೆ ಬಳಗ ಫಿಶರೀಸ್ ಕಾಲೋನಿ ಉಪ್ಪುಂದ, ಲಯನ್ಸ್ ಕ್ಲಬ್ ಉಪ್ಪುಂದ- ಬೈಂದೂರು, ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ ಇವರುಗಳ ಸಹಯೋಗದಲ್ಲಿ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಇವರ ಸಹಕಾರದೊಂದಿಗೆ ಕೆಎಂಸಿ ಮಣಿಪಾಲ ಆಸ್ಪತ್ರೆಯ ವೈದ್ಯರುಗಳಿಂದ ಉಪ್ಪುಂದದ ರೈತ ಸಿರಿ ಸಭಾಭವನದಲ್ಲಿ ಬೃಹತ್ ಉಚಿತ ಹೃದಯ ತಪಾಸಣೆ, ಬಾಯಿ ಸ್ತನ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಶಿಬಿರ ಬಿಪಿ ಶುಗರ್, ಜನರಲ್ ಮೆಡಿಸನ್ ತಪಾಸಣಾ ಸೌಲಭ್ಯದೊಂದಿಗೆ ನಡೆಯಿತು.

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಪೈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು

ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷರಾದ ಪ್ರಸಾದ್ ಪ್ರಭು ಸಭಾಧ್ಯಕ್ಷತೆ ವಹಿಸಿದ್ದರು. ಮಣಿಪಾಲದ ವೈದ್ಯರಾದ ಡಾ. ಯಶ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಸಿಕಂದರ್, ಜೆಸಿಐ ಉಪ್ಪುಂದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಫ್ರೆಂಡ್ಸ್ ಕ್ಲಬ್ ಉಪ್ಪುಂದ ಅಧ್ಯಕ್ಷರಾದ ರತ್ನಾಕರ ಖಾರ್ವಿ, ಜೇಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ಜೆನರೇಂದ್ರ ಶೆಟ್, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜ ಸಂಘ (ರಿ) ಅಧ್ಯಕ್ಷರಾದ ಮೋಹನ್ ರೇವಣಕರ್, ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಟ್ರಸ್ಟ್ ರಿ ಉಪ್ಪುಂದ ಕಾರ್ಯದರ್ಶಿ ಮಂಜುನಾಥ ಮಹಾಲೆ, ಆನೆ ಗಣಪತಿ ಆಟೋ ರಿಕ್ಷಾ ಮಾಲಕ ಚಾಲಕರ ಸಂಘ ಅಂಬಾಗಿಲು ಅಧ್ಯಕ್ಷರಾದ ರಾಮ ಉಪ್ಪುಂದ, ಆಸರೆ ಬಳಗ ಫಿಶರೀಸ್ ಕಾಲೋನಿ ಉಪ್ಪುಂದ ಅಧ್ಯಕ್ಷರಾದ ಜಯರಾಮ ಖಾರ್ವಿ, ಲಯನ್ಸ್ ಕ್ಲಬ್ ಉಪ್ಪುಂದ ಬೈಂದೂರು ಅಧ್ಯಕ್ಷರಾದ ಗಿರೀಶ್ ಶಾನುಭಾಗ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಕಾರ್ಯದರ್ಶಿ ಸುಬ್ರಮಣ್ಯ ಜಿ ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು 200 ಕ್ಕೂಹೆಚ್ಚು ಮಂದಿ ಹೃದಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರದ ಸೌಲಭ್ಯ ಪಡೆದರು.

Exit mobile version