Kundapra.com ಕುಂದಾಪ್ರ ಡಾಟ್ ಕಾಂ

ಗ್ರಾ.ಪಂಗಳಲ್ಲಿ ಕನಿಷ್ಠ ಎರಡು ಗ್ರಾಮ ಸಭೆ ನಡೆಸಿ: ಜಮಾಬಂಧಿ ಕಾರ್ಯಕ್ರಮದಲ್ಲಿ ಸಿಇಒ ಪ್ರಸನ್ನ ಸೂಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳ ಕನಿಷ್ಠವಾಗಿ ನಡೆದರಿರುವುದು ಖೇದದ ವಿಷಯ. ಎಲ್ಲಾ ಗ್ರಾಮ ಪಂಚಾಯಿತಿಗಲ್ಲಿ ಕನಿಷ್ಠ ಎಂದರೂ ಎರಡು ಗ್ರಾಮ ಪಂಚಾಯಿತಿ ಸಭೆ ನಡೆಸಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಗ್ರಾಮ ಸಭೆಗಳ ನಿಯಮಿತವಾಗಿ ನಡೆಸುವಂತೆ ಸೂಚಿಸಲು ತಾಲೂಕು ಪಂಚಾಯಿತಿ ಕಾರ್ಯನಿರ್ಹಣಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಸೂಚಿಸಿದರು.

ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಮಾಬಂಧಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಂದಾಪುರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸೇರಿ ಒಟ್ಟು 62 ಗ್ರಾಮ ಸಭೆ ನಡೆದಿದೆ ಎಂದು ಲೆಕ್ಕಪತ್ರ ವಿಭಾಗದ ಸಿಬ್ಬಂದಿ ಮಾಹಿತಿ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ ಪ್ರಸನ್ನ ಗ್ರಾಮ ಪಂಚಾಯಿತಿ ಸಮಾನ್ಯ ಸಭೆ ನಡೆಸದಿರುವು ಸರಿಯಲ್ಲ. ಪ್ರತಿ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆ ನಡೆಸುವುದು ಅವರ ಜವಾಬ್ದಾರಿಯಾಗಿದ್ದು, ತಾಲೂಕು ಪಂಚಾಯಿತಿ ಎಲ್ಲಾ ಗ್ರಾಮಗಳಿಗೂ ಗ್ರಾಮ ಸಭೆ ನಡೆಸುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ತಾಲೂಕು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಯಲ್ಲದೆ ಎಸ್ಸಿಎಸ್ಟಿ ಗ್ರಾಮ ಸಭೆ ನಡೆಯುತ್ತಿಲ್ಲ. ಎಸ್ಸಿಎಸ್ಟಿ ಮನೆ ಬಳಿ ಅಬಕಾರಿ ಗೋದಾಮಿದ್ದು ಎಷ್ಟು ಬಾರಿ ತೆರವು ಮಾಡಿಸುವಂತೆ ಮನವಿ ಮಾಡಿದರೂ ತೆರವಾಗಿಲ್ಲ. ಏಕಗವಾಕ್ಷ್ಸಿ ಅರ್ಜಿಗಳ ಕ್ಲಿಯರ್ ಆಗುತ್ತಿಲ್ಲ. ಜಮಾಬಂಧಿ ಮುಂಚಿತವಾಗಿ ಮಾಹಿತಿ ಬುಕ್‌ಲೆಟ್ ನೀಡಿಲ್ಲ ಎಂದು ಭೀಮ ಘರ್ಷನೆ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ಹಾಗೂ ಚಂದ್ರಮ ತಲ್ಲೂರು ಸಭೆಯ ಗಮನ ಸೆಳೆದರು.

ಪ್ರತಿಕ್ರಿಯೆ ನೀಡಿದ ಸಿಇಒ ಪ್ರಸನ್ನ ಹೆಚ್., ಎಸ್ಸಿಎಸ್ಟಿ ಗ್ರಾಮ ಸಭೆ ನಡೆಯುವಂತೆ ನೋಡಿಕೊಳ್ಳಬೇಕು. ಬಂದ ಅರ್ಜಿಗಳಲ್ಲಿ ಮೂರು ಅರ್ಜಿ ಮಾತ್ರ ವಿಲೆ ಆಗಿದ್ದು, ತಕ್ಷಣ ಎಲ್ಲಾ ಅರ್ಜಿ ವಿಲೇವಾರಿ ಮಾಡುವಂತೆ ಸೂಚಿಸಿದರು.

ಕುಂದಾಪುರ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕೆ.ಜೆ., ಇದ್ದರು. ತಾಪಂ ಮೆನೇಜರ್ ರಾಮಚಂದ್ರ ಮಯ್ಯ ಸ್ವಾಗತಿಸಿದರು. ಲೆಕ್ಕಾಧಿಕಾರಿ ಸಂತೋಷ ಲೆಕ್ಕಪತ್ರ ಮಂಡಿಸಿದರು.

Exit mobile version