Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್: ಮಕ್ಕಳ ಬೇಸಿಗೆ ಶಿಬಿರ

ಗಂಗೊಳ್ಳಿ: ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವ್ಯಕ್ತಿ ವಿಕಾಸ ಕೇಂದ್ರ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀ ರವಿಶಂಕರ ಗುರುಜೀಯವರ ಆರ್ಟ್ ಎಕ್ಸೆಲ್ ಮಕ್ಕಳ ಬೇಸಿಗೆ ಶಿಬಿರ ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಸರ್ವಾಂಗೀಣ ಬೆಳವಣಿಗೆಗಾಗಿ 8 ರಿಂದ 13 ವರ್ಷಗಳ ವಯೋಮಿತಿಯ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದ ಆರ್ಟ್ ಆಫ್ ಲೀವಿಂಗ್‌ನ ಶಿಕ್ಷಕಿಯರಾದ ಅನುಷಾ ಹಾಗೂ ಭಾನುಮತಿ ಶೇಟ್ ಅವರು, ಆಧುನಿಕ ಜೀವನ ಶೈಲಿಯಲ್ಲಿರುವ ಒತ್ತಡಗಳನ್ನು ಸಮರ್ಪಕವಾಘಿ ನಿಭಾಯಿಸಲು ಬೇಕಾಗುವ ಮಾನಸಿಕ ಸಿದ್ಧತೆಗಳನ್ನು ಮಾಡಿಸುವುದರೊಂದಿಗೆ, ವ್ಯಕ್ತಿ ಮೌಲಿಕತೆಯ ಬೋಧನೆ, ನಾಚಿಕೆ ಮತ್ತು ಪುಕ್ಕಲು ಸ್ವಭಾವದ ಹೋಗಲಾಡಿಸುವಿಕೆ, ಸುಪ್ತ ಪ್ರತಿಭೆಯ ಅನಾವರಣ, ಆತ್ಮವಿಶ್ವಾಸ ಮತ್ತು ಯೋಗ್ಯತೆಯ ಅರಿವನ್ನು ಮೂಡಿಸುವುದರಲ್ಲಿ ಶಿಬಿರವು ಸಹಕಾರಿಯಾಗುತ್ತದೆ ಎಂದರು.

ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ನಾಗರಾಜ ಖಾರ್ವಿ ಉಪಸ್ಥಿತರಿದ್ದರು. ಕ್ಲಬ್‌ನ ಹಿರಿಯ ಸದಸ್ಯ ಜಿ.ಸೂರ್ಯಕಾಂತ ಖಾರ್ವಿ ಸ್ವಾಗತಿಸಿದರು. ಕ್ಲಬ್‌ನ ಕಾರ್ಯದರ್ಶಿ ಸತೀಶ ಎಂ.ಖಾರ್ವಿ ವಂದಿಸಿದರು.

Exit mobile version