Kundapra.com ಕುಂದಾಪ್ರ ಡಾಟ್ ಕಾಂ

ಉತ್ಸವದಿಂದ ಜಾತಿ ಧರ್ಮಗಳ ನಡುವೆ ಸಾಮರಸ್ಯ ಮೂಡಬೇಕು: ಎಸ್ಪಿ ಅಣ್ಣಮಲೈ

ಕುಂದಾಪುರ: ದೇಶದಲ್ಲಿ 75ಕೋಟಿ ಸಂಖ್ಯೆಯಲ್ಲಿ ಯುವಕರು ಇದ್ದಾರೆ. ಈ ಯುವಕ ಪಡೆ ಅನೇಕ ಧಾರ್ಮಿಕ ಉತ್ಸವಗಳನ್ನು ಮಾಡುತ್ತಿದ್ದಾರೆ. ಧಾರ್ಮಿಕ ಉತ್ಸವಗಳು ಜಾತಿ, ಧರ್ಮ, ಪಂಗಡಗಳ ನಡುವೆ ಸಂಘರ್ಷವಾಗಬಾರದು. ಯುವ ಪಡೆ ಧರ್ಮಕ್ಕಾಗಿ ಜಗಳ ಮಾಡದೆ, ಅಭಿವೃದ್ಧಿಗಾಗಿ ಜಗಳವಾಡಬೇಕು ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಕಾರಿ ಅಣ್ಣಾಮಲೈ ಅವರು ಹೇಳಿದರು.

ಅವರು ಕಂಡ್ಲೂರು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ರಾತ್ರಿ ಜರುಗಿದ ಕಂಡ್ಲೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಂಡ್ಲೂರು ಪರಿಸರದಲ್ಲಿ ಸಮಾನ ಸಂಖ್ಯೆಯಲ್ಲಿ ಹಿಂದುಗಳು ಹಾಗೂ ಮುಸ್ಲಿಂ ಬಾಂಧವರು ಇದ್ದಾರೆ. ಇಲ್ಲಿ ಸಣ್ಣ ಪುಟ ಘಟನೆಗಳು ಹೋರತು ಪಡಿಸಿದ್ದರೆ, ಶ್ರೀ ಶಾರದೋತ್ಸವ ಸಮಿತಿಯವರು ಸೌರ್ಹಾದತೆಯಿಂದ ಉತ್ಸವವನ್ನು ಮಾಡಿದ್ದಾರೆ. ನವರಾತ್ರಿ ಮಹೋತ್ಸವವು ವಿಶೇಷವಾದ ದಿನವಾಗಿದೆ. ದೇವರು ದುಷ್ಠರನ್ನು ಸಂಹಾರ ಮಾಡಿ, ಧರ್ಮ ರಕ್ಷಿಸಿದ್ದಾರೆ. ಇದರ ಪ್ರತಿಕವಾದ ನವರಾತ್ರಿ ಮಹೋತ್ಸವವು ದೂರದ ಊರುಗಳಲ್ಲಿರುವರಿಗೆ, ಊರಿಗೆ ಬಂದು ಆತ್ಮೀಯತೆ ಹಾಗೂ ಸೌರ್ಹಾದತೆಯಿಂದ ಬೇರೆಯುವ ದಿನವಾಗಿದೆ. ಸೌರ್ಹದತೆಯಿಂದ ಧಾರ್ಮಿಕ ಕಾರ್ಯ ಮಾಡುವ ಮೂಲಕ, ದೇಶವನ್ನು ಮುನ್ನಡೆಸುವ ಕಾರ್ಯ ಯುವ ಪಡೆಯಿಂದ ಆಗಬೇಕು ಎಂದು ಹೇಳಿದರು.

ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನ ಅರ್ಚಕ ಸಗ್ರಿ ವೇದವ್ಯಾಸ ಭಟ್ ಧಾರ್ಮಿಕ ಪ್ರವಚನ ನೀಡಿದರು. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ್ ಮಕ್ಕಿಮನೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಕಂಡ್ಲೂರು ಶ್ರೀ ಕನ್ನಿಕಾ ವಿದ್ಯಾಭಾರತಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಸೀಮಾ ವಸಂತ ಶೇರೆಗಾರ್, ಬೆಂಗಳೂರು ಕನ್ನಿಕಾ ಕಂಗನ್ ಸ್ಟೋರ್‌ನ ಮಾಲಕ ಕೃಷ್ಣಯ್ಯ ಜೋಗಿ, ಉದ್ಯಮಿ ರಾಜಶೇಖರ ಜೋಗಿ ಕಂಡ್ಲೂರು, ಶ್ರೀ ಶಾರದ ಮಹೋತ್ಸವ ಸಮಿತಿಯ ಗೌರಾವಾಧ್ಯಕ್ಷ ಪ್ರಭಾಕರ ನಾಯಕ್, ಕಾರ್ಯದರ್ಶಿ ಮಂಜುನಾಥ ಶೇರಿಗಾರ್ ಮಕ್ಕಿಮನೆ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿ ವಿಜಯ ಪುತ್ರನ್ ಮೊದಲಾದವರು ಉಪಸ್ಥಿತರಿದರು.

ಸಮಾರೋಪ ಸಮಾರಂಭದ ನಂತರ ಶ್ರೀ ಅನಂತಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ಪೆರ್ಡೂರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ ನಡೆಯಿತ್ತು. ಪ್ರಕಾಶ ಆಚಾರ್ಯ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ವಿ. ಬಾಲಚಂದ್ರ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಉಪನ್ಯಾಸಕ ಪ್ರತಾಪಚಂದ್ರ ಶೆಟ್ಟಿ ನಿರೂಪಿಸಿದರು. ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿಯ ಅಧ್ಯಕ್ಷ ದಿನೇಶ್ ಆಚಾರ್ಯ ಕಂಡ್ಲೂರು ವಂದಿಸಿದರು.

Exit mobile version