Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟುಗಳಿಗೆ ಬೆಂಕಿ. ಕೋಟ್ಯಂತರ ರೂ. ನಷ್ಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.13:
ಮೀನುಗಾರಿಕಾ ಬೋಟುಗಳಿಗೆ ಬೆಂಕಿ ತಗುಲಿ ಬೋಟುಗಳು ಸುಟ್ಟು ಕರಕಲಾಗಿರುವ ಘಟನೆ ಇಂದು ಮುಂಜಾನೆ ತಾಲೂಕಿನ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯ ಬಂದರಿನಲ್ಲಿ ನಡೆದಿದೆ. ಘಟನೆಯಲ್ಲಿ 7 ಬೋಟು, 2 ದೋಣಿ, 2 ಬೈಕ್, ಜನರೇಟರ್ ಹಾಗೂ ಮೀನುಗಾರಿಕಾ ಸಲಕರಣೆಗಳಿಗೆ ಬೆಂಕಿ ತಗುಲು ಸುಟ್ಟು ಕರಕಲಾಗಿದೆ.

ದುರ್ಘಟನೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ. ಕುಂದಾಪುರ ಬೈಂದೂರು ಹಾಗೂ ಇತರೆಡೆಯ ಅಗ್ನಿಶಾಮಕ ದಳ ತಂಡ, ಬಂದರು ಠಾಣೆ ಪೊಲೀಸರು, ಸಾರ್ವಜನಿಕರು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂಜೆಯ ವೇಳೆ ಸಿಡಿಸಿದ ಪಟಾಕಿಯಿಂದ ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ಇದ್ದು, ತನಿಕೆಯ ಬಳಿಕ ಕಾರಣ ತಿಳಿಯಲಿದೆ.

Exit mobile version