Kundapra.com ಕುಂದಾಪ್ರ ಡಾಟ್ ಕಾಂ

ಪಡುವರಿಯ ಅಕ್ಷರ ಪಟವಾಲ್‌ಗೆ ಕಾರಂತರ ಬಾಲ ಪುರಸ್ಕಾರ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಕ್ಷರ ಪಟ್ವಾಲ್ ಇವರಿಗೆ ಸಾಹಿತ್ಯ, ರಂಗಭೂಮಿ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೋಟ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ವತಿಯಿಂದ ನೀಡಲಾಗುವ ಕಾರಂತ ಬಾಲ ಪುರಸ್ಕಾರ ದೊರೆತಿದೆ.

ಈ ಮೊದಲು ಕಾಸರಗೋಡುವಿನ ಕನ್ನಡ ಭವನ ಮತ್ತು ಗ್ರಂಥಾಲಯದಿಂದ ನೀಡಲಾಗುವ ಅಂತರಾಜ್ಯ ಯುವ ಪ್ರತಿಭಾ ಪ್ರಶಸ್ತಿ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಭಾಗಲಕೋಟೆಯ ಘಟಕದಿಂದ ರಾಜ್ಯ ಮಟ್ಟದ ಮಕ್ಕಳ ಪ್ರತಿಭಾ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಅಕ್ಷರಾ ಪಟವಾಲ್ ಪಡೆದುಕೊಂಡಿದ್ದಾರೆ.

ಅಕ್ಷರ ಪಟವಾಲ್ ಬೈಂದೂರು ಪಡುವರಿಯ ಕೆಎಸ್ಆರ್ಟಿಸಿ ನೌಕರ ದಿನಕರ ಪಟವಾಲ್ ಮತ್ತು ಶಿಕ್ಷಕಿ ಸೀತಾ ಪಿ ಇವರ ಪುತ್ರಿ

Exit mobile version