Kundapra.com ಕುಂದಾಪ್ರ ಡಾಟ್ ಕಾಂ

ಕೋ.ಮ. ಕಾರಂತ ಪ್ರಶಸ್ತಿಗೆ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಾಹಿತಿ, ನಾಟಕಗಾರ, ಯಕ್ಷಗಾನ ಪ್ರಸಂಗಕರ್ತ, ಕವಿ, ವಾಚಕಾಭಿನಯ, ಪರಿಣತ, ವಾಗ್ಮಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರನ್ನು ಕುಂದಪ್ರಭ ಸಂಸ್ಥೆಯ ಕೋ.ಮ.ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ 07-01-2024ರಂದು ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯಲಿದೆ.

ಹಿರಿಯ ಪತ್ರಕರ್ತ, ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿ ಇದಾಗಿದೆ.

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಬಿಎಸ್ಎನ್ಎಲ್ ಉದ್ಯೋಗಿ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಯಕ್ಷಗಾನ, ನಾಟಕ, ಸಾಹಿತ್ಯ, ಸಂಗೀತ, ನೃತ್ಯದಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ. ಡಾ| ಎಸ್. ಎಲ್. ಭೈರಪ್ಪನವರ ಮಂದ್ರ ಕಾದಂಬರಿ ನಾಟಕಕ್ಕೆ ರೂಪಾಂತರಗೊಳಿಸಿದವರು. ಈ ನಾಟಕ ಬಹಳ ಪ್ರಸಿದ್ಧವಾಯಿತು. ಹಲವಾರು ಶ್ರೇಷ್ಠ ಕೃತಿಗಳನ್ನು ಕನ್ನಡ ರೂಪ, ನಾಟಕ ರೂಪಕ್ಕಿಳಿಸಿದವರು.

ಇವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗ ಪ್ರಶಸ್ತಿ, ನೂಪುರ ಭ್ರಮರಿ ಸಂಸ್ಥೆಯ ವಿಮರ್ಶಾ ವಾಙ್ಮಯಿ ಪ್ರಶಸ್ತಿ, ಬೆಂಗಳೂರು ಗಾಯನ ಸಮಾಜದ ಶ್ರೀ ಕಲಾ ಜ್ಯೋತಿ ಪ್ರಶಸ್ತಿ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ ಇವರ ಕವನ ಸಂಕಲನ “ಋತುಪರ್ಣ”ಕ್ಕೆ ಪ್ರಶಸ್ತಿ ನೀಡಿದೆ. ಇತ್ತೀಚೆಗೆ ಇವರ ಕೃತಿ ಅಪ್ಪಯ್ಯನ ಆಸ್ತಿಕತೆ ೬೮೦ ಪುಟಗಳ ಕಾದಂಬರಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದ್ದು, ಕುಂದಾಪ್ರ ಕನ್ನಡ ನೆಲದ ಈ ಸತ್ಯಕತೆ ಬಹಳ ಮೆಚ್ಚುಗೆ ಪಡೆದಿದೆ.

Exit mobile version