Kundapra.com ಕುಂದಾಪ್ರ ಡಾಟ್ ಕಾಂ

ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ರೌಪ್ಯೋತ್ಸವದ ಅಂಗವಾಗಿ ಪೋಷಕರಿಗೆ ವಿವಿಧ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ರೌಪ್ಯೋತ್ಸವದ ಅಂಗವಾಗಿ ಆಕೃತಿ ಶೀರ್ಷಿಕೆಯಡಿಯಲ್ಲಿ 09-12-23 ಶನಿವಾರದಂದು ಪೋಷಕರಿಗಾಗಿ ರಂಗೋಲಿ, ಚಿತ್ರಕಲೆ, ಕೋಲೇಜ್ ರಚನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಉದ್ಘಾಟನೆ ಗೈದು ಮಾತನಾಡಿದ ಶ್ರೀಯುತ ರಾಘವೇಂದ್ರ ಚಾತ್ರಮಕ್ಕಿ ಆಕೃತಿ ಎಂಬ ಪರಿಕಲ್ಪನೆಯನ್ನು ತಮ್ಮ ಚಿತ್ರಕಲಾ ಭಾಷೆಯಲ್ಲಿ ವಿಶ್ಲೇಷಿಸುತ್ತಾ ಬಿಂದು, ರೇಖೆಗಳಿಂದ ಸಂಪೂರ್ಣ ಆಕೃತಿ ರಚನೆಯಾಗುತ್ತದೊ ಹಾಗೆ 1998ರಲ್ಲಿ ಬಿಂದುವಿನಿಂದ ಆರಂಭವಾದ ಶಿಕ್ಷಣ ಸಂಸ್ಥೆ ಇಂದು 25 ಸಂವತ್ಸರಗಳನ್ನು ಪೂರೈಸಿ ಒಂದು ಪರಿಪೂರ್ಣ ಆಕೃತಿಯನ್ನು ಪಡೆದುಕೊಂಡಿದೆ ಎಂಬುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು .

ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ತೀರ್ಪುಗಾರರಾಗಿ ಸರಕಾರಿ ಪ್ರೌಢಶಾಲೆ ಸಿದ್ದಾಪುರದ ಚಿತ್ರಕಲಾ ಶಿಕ್ಷಕರಾದ ರಾಘವೇಂದ್ರ ಚಾತ್ರಮಕ್ಕಿ, ಸರಕಾರಿ ಪ್ರೌಢಶಾಲೆ ವಡೇರ ಹೋಬಳಿ ಯ ಚಿತ್ರಕಲಾ ಶಿಕ್ಷಕರಾದ ವೇಣುಗೋಪಾಲ್ ಶೆಟ್ಟಿ ಹಾಗೂ ಚಿತ್ತಾರ ಸಂಸ್ಥೆಯ ಸಂಚಾಲಕರಾದ ರಾಜೇಂದ್ರ ಹಳ್ಳಿಹೊಳೆ ಆಗಮಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳು ಕಲಾ ಕುಂಚದ ಮೂಲಕ ದೀಪವನ್ನು ಪ್ರಜ್ವಲಿಸುವಂತೆ ಮಾಡಿ ವಿನೂತನ ಮಾದರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರು, ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡ ಪೋಷಕ ಬಾಂಧವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವುದರೊಂದಿಗೆ ಸಿಕ್ಕ ಅವಕಾಶವನ್ನು ಸದುಪಯೋಗಗೊಳಿಸಿಕೊಂಡು ಸಂತೋಷದಿಂದ ಸಂಭ್ರಮಿಸಿ ಸಂಸ್ಥೆಯ ಬಗ್ಗೆ ಧನ್ಯತಾ ಭಾವವನ್ನು ತೋರಿದರು.

ಕನ್ನಡ ಉಪನ್ಯಾಸಕಿ ವೈಶಾಲಿ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರೆ, ಚಿತ್ರಕಲಾ ಶಿಕ್ಷಕಿ ಮೇಘನಾ ವಂದಿಸಿದರು.

Exit mobile version