ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ ಕಾರಿನಲ್ಲಿದ್ದ ಒಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಗುರುವಾರ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಸಂಭವಿಸಿದೆ.
ಅಪಘಾತದಲ್ಲಿ ಉದ್ಯಾವರದ ಸಂಪಿಗೆನಗರ ನಿವಾಸಿ ರೋಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ ಉದ್ಯಾವರ ವೈಸಿಎಂ ಅಧ್ಯಕ್ಷ ಜೋಯಿಸ್ಟನ್ ಕ್ಯಾಸ್ಟಲಿನೋ (22) ಸಾವನ್ನಪ್ಪಿದವರು.
ಕಾರಿನಲ್ಲಿದ್ದ ಲ್ಯಾಸ್ಟನ್ ಪಿಂಟೋ (22), ಜಸ್ಟಿನ್ ಕರ್ಡೊಜ (22), ವಿಲ್ಸನ್ ಮಾರ್ಟಿನ್ (23), ಗ್ಲಾಡ್ಸನ್ ಡಿಸಿಲ್ವಾ (23) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಉದ್ಯಾವರದ ವೈಸಿಎಂ ಘಟಕದ ಸದಸ್ಯರೆಂದು ತಿಳಿದು ಬಂದಿದೆ. ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.