ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶ ರಾಜ್ಯದ ಹಿತಕ್ಕೆ ಸತ್ಯ ಧರ್ಮದ ಪ್ರತಿಪಾದನೆಗೆ ತನ್ನದೇ ಆದ ಕೊಡುಗೆಯನ್ನು ಬ್ರಾಹ್ಮಣ ಸಮಾಜ ನೀಡಿದ್ದು ವಿವಿಧ ಸಾಮ್ರಾಜ್ಯಗಳ ಸ್ಥಾಪನೆಯಲ್ಲೂ ಸುಶಾಸನ ನೆಲೆಸುವಂತೆ ಮಾಡುವಲ್ಲಿಯೂ ಸಾವಿರಾರು ವರ್ಷಗಳಿಂದ ಆಳುವ ಪ್ರಭುಗಳಿಗೆ ಸಲಹೆ ನೀಡುತ್ತಾ ಸ್ಪೂರ್ತಿಯ ಸೆಲೆಯಾಗಿ ಲೋಕ ಹಿತಕ್ಕಾಗಿ ಶ್ರಮಿಸುತ್ತಾ ಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿಯೂ ವಿಪ್ರರೂ ಗಾಯತ್ರಿ ಉಪಾಸನೆ, ನಿತ್ಯ ಕರ್ಮಾನುಷ್ಠಾನ ಮಾಡಿ ವಿಪ್ರರು ಬ್ರಾಹ್ಮಣ್ಯದ ಕುರಿತು ಜ್ಞಾನವನ್ನು ಹೊಂದಿರಬೇಕೆಂದು ವೇದಮೂರ್ತಿ, ಪ್ರಶಾಂತ ಅಡಿಗ ಸೌಕೂರು ಇವರು ಹೇಳಿದರು.
ಅವರು ಅರೆಹೊಳೆ ಶಾಸ್ತ್ರೀಯ ಮನೆಯಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ೨೯ನೇ ವಾರ್ಷಿಕ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು.
ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಅಧ್ಯಕ್ಷ ಶುಭಚಂದ್ರ ಹತ್ವಾರ್ ಜ್ಯೋತಿ ಬೆಳಗಿಸಿ ಅಧಿವೇಶನ ಉದ್ಘಾಟಿಸಿ ಮಾತನಾಡುತ್ತಾ ಬ್ರಾಹ್ಮಣ ಸಂಘಟನೆಯ ವಿಚಾರವಾಗಿ ಮಹತ್ವದ ಮಹಿತಿಗಳನ್ನು ನೀಡುತ್ತಾ ಶ್ರೀ ಗಾಯತ್ರಿ ಟ್ರಸ್ಟ್ ಮೂಲಕ ವಿಪ್ರ ಭವನವನ್ನು ಕುಂದಾಪುರದಲ್ಲಿ ನಿರ್ಮಿಸಲಾಗುವುದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ಹಾಗೂ ಈ ಬಗ್ಗೆ ಪೂರಕ ಮಾಹಿತಿಗಳನ್ನು ಒದಗಿಸುವ ಕಾರ್ಯ ಸಂಘಟನೆಗಳಿಂದ ಆಗಬೇಕು ಎಂದು ಕರೆ ನೀಡಿದರು.
ವಲಯದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿವೃತ್ತರಾದ ವೆಂಕಟೇಶ ಮಯ್ಯ ಉಪ್ಪುಂದ, ಜಯಲಕ್ಷ್ಮೀ ಶಾಸ್ತ್ರೀ ಅರೆಹೊಳೆ ವಲಯದ ಪರವಾಗಿ ಇವರನ್ನು ಸನ್ಮಾನಿಸಲಾಯಿತು. ಸ್ಕೌಡ್ಸ್ ಆಂಡ್ ಗೈಡ್ಸ್ ರಾಷ್ಟ್ರ ಮಟ್ಟದ ಆಯ್ಕೆಗೆ ಶ್ರೀನಾಭ ಉಪಾಧ್ಯ ಮತ್ತು ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಮಾರಿ ದಿವ್ಯಶ್ರೀ ಮಯ್ಯ ಅವರನ್ನಾ ವಲಯದ ಪರವಾಗಿ ಅಭಿನಂದಿಸಲಾಯಿತು. 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಹಾಗೂ ಪಿಯುಸಿಯಲ್ಲಿ ವಲಯಕ್ಕೆ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನಾ ವಿಶೇಷವಾಗಿ ಅಭಿನಂದಿಸಲಾಯಿತು.
ಉಪ್ಪುಂದ ವಲಯದ ಅಧ್ಯಕ್ಷ ಅರುಣ್ ಶ್ಯಾನುಭೋಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಉದ್ಯಮಿ ಕೆ.ಉಮೇಶ್ ಶ್ಯಾನುಭೋಗ ಕಿರಿಮಂಜೇಶ್ವರ, ವೇದ ಮೂರ್ತಿ ಶ್ರೀ ವೆಂಕಟೇಶ ಶಾಸ್ತ್ರೀ ಅರೆಹೊಳೆ, ಗೌರವಾಧ್ಯಕ್ಷ ಯು. ಸಂದೇಶ ಭಟ್, ಕಾರ್ಯದರ್ಶಿ ಪ್ರಶಾಂತ ಮಯ್ಯ, ಕೋಶಾಧ್ಯಕ್ಷ ಹೆಚ್ ಜಗದೀಶ್ ರಾವ್, ಮಹಿಳಾವೇದಿಕೆ ಅಧ್ಯಕ್ಷೆ ಹೇಮಾ ಹೊಳ್ಳ, ಯುವ ವೇದಿಕೆ ಅಧಕ್ಷ ಪದ್ಮನಾಭ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಶ್ರುತಿ ಶಾಸ್ತ್ರೀ, ಮೇಘನಾ ಶಾಸ್ತ್ರೀ, ರಚನಾ ಪ್ರಾರ್ಥಿಸಿದರು, ದೀಟಿ ಸೀತಾರಾಮಯ್ಯ ಸ್ವಾಗತಿಸಿದರು, ಪ್ರಶಾಂತ ಮಯ್ಯ ವಂದಿಸಿದರು, ಪ್ರಕಾಶ ಐತಾಳ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ತಿನ ಯುವ ವೇದಿಕೆ ಅಧ್ಯಕ್ಷ ಅವನೀಶ ಹೊಳ್ಳ ಮುಖ್ಯ ಅತಿಥಿಗಳಾಗಿದ್ದರು. ವೇದ ಮೂರ್ತಿ ನಾಗರಾಜ ಶಾಸ್ತ್ರೀ ಅರೆಹೊಳೆ, ಗೌರವಾಧ್ಯಕ್ಷ ಯು. ಸಂದೇಶ ಭಟ್, ಕಾರ್ಯದರ್ಶಿ ಪ್ರಶಾಂತ ಮಯ್ಯ, ಹೇಮಾ ಹೊಳ್ಳ, ಪದ್ಮನಾಭ ಹೆಬ್ಬಾರ್ ಉಪಸ್ಥಿತಿಯಲ್ಲಿದ್ದರು. ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ತಿನ ಕಾರ್ಯದರ್ಶಿ ರತ್ನಾಕರ ಉಡುಪ ಬಹುಮಾನ ವಿತರಿಸಿದರು. ಹಾಗೆಯೇ ತಾಲೂಕು ಮಹಿಳಾ ಅಧ್ಯಕ್ಷೆ ಸಂಧ್ಯಾ ಉಡುಪ ವಿದ್ಯಾರ್ಥಿ ವೇತನ ವಿತರಿಸಿದರು. ವಲಯಾಧ್ಯಕ್ಷ ಅರುಣ ಶ್ಯಾನುಭೋಗ ಅಧ್ಯಕ್ಷತೆ ವಹಿಸಿದರು. ಆತಿಥ್ಯ ವಹಿಸಿದ ಅರೆಹೊಳೆ ವೆಂಕಟೇಶ ಶಾಸ್ತ್ರೀ, ನಾಗರಾಜ ಶಾಸ್ತ್ರೀಯವರನ್ನು ಪರಿಷತ್ತಿನ ಪರವಾಗಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಾನ್ವಿ ಅಡಿಗ ಪ್ರಾರ್ಥಿಸಿದರು, ಪ್ರಶಾಂತ ಮಯ್ಯ ಸ್ವಾಗತಿಸಿದರು, ಪದ್ಮನಾಭ ಹೆಬ್ಬಾರ್ ವಂದಿಸಿದರು, ಶಿಕ್ಷಕಿ ಸುಮಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ನಡೆದ ವಾರ್ಷಿಕ ಮಹಾಸಭೆಯಲ್ಲಿ ವರದಿ ಮತ್ತು ಆಯಾವ್ಯಯ ಮಂಡಿಸಿ ಸಭೆಯ ಒಪ್ಪಿಗೆ ಪಡೆಯಲಾಯಿತು. ಮುಂದಿನ ೨ ವರ್ಷದ ಅವಧಿಗೆ ನೂತನ ಕಾರ್ಯಕಾರಿ ಮಂಡಳಿ ರಚಿಸಲಾಯಿತು. ವಿಪ್ರ ಸದಸ್ಯರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಸಲಾಯಿತು.