Kundapra.com ಕುಂದಾಪ್ರ ಡಾಟ್ ಕಾಂ

ಅಂತರಾಷ್ಟ್ರೀಯ ವರ್ಷದ ಸಾಧಕರಾಗಿ ಮೈತ್ರೇಯಿ ಕಾರಂತ್ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅಂತರಾಷ್ಟ್ರೀಯ ಖ್ಯಾತಿ ವೈಮಾನಿಕ ಹಾಗೂ ಪ್ರವಾಸಿ ಮಾರ್ಗದರ್ಶಿ ಸಂಸ್ಥೆಯಾದ “ದಿ ಮೂಡಿ ಡೆವಿಟ್ ರಿಪೋರ್ಟ್” (The Moodie Davitt Report) ಸಂಸ್ಥೆ 2023ನೇ ಸಾಲಿನ 15 ಸಾಧಕರಲ್ಲಿ ದಿ. ಕೋ. ಮ. ಕಾರಂತರ ಪುತ್ರಿ ಮೈತ್ರೇಯಿ ಕಾರಂತರನ್ನು ಆಯ್ಕೆ ಮಾಡಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮಾನವೀಯತೆ, ಸೇವಾಗುಣ, ಜನಾಭಿವೃದ್ಧಿ ಕೆಲಸಗಳ ಮೂಲಕ ಸಮಾಜದ ಅಭಿವೃದ್ಧಿಗೆ ಕಾರಣರಾಗುವವರನ್ನು ಮೂಡಿ ಡೆವಿಟ್ ಗುರುತಿಸಿ ತನ್ನ ಟಾವಲ್ ರಿಟೈಲ್ಸ್ ಲುಕ್ ಬುಕ್ ನಲ್ಲಿ ಪ್ರಕಟಿಸುತ್ತದೆ. ಸಾಧಕರನ್ನು ಗೌರವಿಸುತ್ತದೆ. ಕಳೆದ 21 ವರ್ಷಗಳಿಂದ ಈ ಕಾರ್ಯ ಸಂಸ್ಥೆ ನಡೆಸಿಕೊಂಡು ಬಂದಿದೆ. ಲಂಡನ್, ಹಾಂಕಾಂಗ್ಗಳಲ್ಲಿ ಕೇಂದ್ರ ಸ್ಥಾನ ಹೊಂದಿದೆ.

ಹಾಂಕಾಂಗ್ನಲ್ಲಿದ್ದು ಕೋ. ಮ. ಕಾರಂತ ಫೌಂಡೇಶನ್ ಮೂಲಕ ಅಸಹಾಯಕರಿಗೆ ಫಿಲಿಫೈನ್ಸ್ನಲ್ಲಿ ಮನೆ ಕಟ್ಟಿ ಕೊಡುವುದು ಸೇರಿ ಹಲವಾರು ಸಮಾಜಾಭಿವೃದ್ಧಿ ಕೆಲಸ ಮಾಡುತ್ತಿರುವ ಮೈತ್ರೇಯಿ ಕಾರಂತರ ಕ್ರಿಯಾಶೀಲತೆಯನ್ನು “ಮೂಡಿ ಡೆವಿಟ್” ಗುರುತಿಸಿದೆ. ಉತ್ತಮ ವಾಕ್ಪಟುತ್ವ, ಸಾಹಿತ್ಯ ಹಾಗೂ ತರಬೇತಿ ಶಿಬಿರಗಳ ಮೂಲಕ ಖ್ಯಾತರಾಗಿರುವ ಮೈತ್ರೇಯಿ ಮಾನವೀಯ ಸೇವೆಗಳಲ್ಲಿ ಹೆಚ್ಚು ಆಸಕ್ತಿ ಉಳ್ಳವರಾಗಿದ್ದಾರೆ.

ಕುಂದಾಪುರದ ದಿ. ಕೋ. ಮ. ಕಾರಂತರ ಪುತ್ರಿಯಾದ ಇವರು ಕುಟುಂಬ ಸಂಬಂಧಿ ನರಸಿಂಹ ಮೂರ್ತಿಯವರ ಮಾರ್ಗದರ್ಶನದಲ್ಲಿ ಮಣಿಪಾಲದಲ್ಲಿ ಶಿಕ್ಷಣ ಪಡೆದು ವಿದೇಶಕ್ಕೆ ತೆರಳಿದ್ದರು.

Exit mobile version