ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಡ್ಕಲ್ ಇದರ ವಾರ್ಷಿಕೋತ್ಸವ ಸಮಾರಂಭ ́ಜಡ್ಕಲ್ ಸಂಭ್ರಮʼ ಇತ್ತೀಚಿಗೆ ಜರುಗಿತು.
ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮೃದ್ಧ ಬೈಂದೂರು ಯೋಜನೆಯ ಬಗ್ಗೆ ಮಾತನಾಡಿದರು ಮತ್ತು ಈ ಯೋಜನೆಯಡಿಯಲ್ಲಿ ಜಡ್ಕಲ್ ಶಾಲೆಯಲ್ಲಿ ಈಗಾಗಲೇ ಕಂಪ್ಯೂಟರ್ ತರಬೇತಿ ಕೇಂದ್ರ, ಗ್ರಂಥಾಲಯ ಹಾಗೂ ಆಟದ ಸಾಮಗ್ರಿಗಳನ್ನು ವಿತರಿಸಲಾಗಿದೆ. ಸ್ವಯಂಸ್ಫೂರ್ತಿ ಫೌಂಡೇಶನ್ ವತಿಯಿಂದ ಸಮೃದ್ಧ ಬೈಂದೂರು ಯೋಜನೆಯ ಮೊದಲ ಕಾರ್ಯಕ್ರಮವನ್ನು ಜಡ್ಕಲ್, ಬಿಜೂರು ಮತ್ತು ಕಾಲ್ತೊಡು ಶಾಲೆಗಳಲ್ಲಿ ಉದ್ಘಾಟಿಸಿದನ್ನು ಮೆಲುಕು ಹಾಕಿದರು. ದಾನಿಗಳ ಮತ್ತು ಹಳೇ ವಿದ್ಯಾರ್ಥಿಗಳ ಸಹಾಯದಿಂದ ಸರ್ಕಾರಿ ಶಾಲೆಗಳು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಹಳೇ ವಿದ್ಯಾರ್ಥಿ ನಾಗರಾಜ್ ಶೆಟ್ಟಿ ಜಡ್ಕಲ್ ಸ್ವಸ್ಥಿವಾಚನಗೈದರು. ಜಡ್ಕಲ್ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಶಿವರಾಮ್ ಬೆಳಾರಿ, ಜಡ್ಕಲ್ ಚರ್ಚ್ ಧರ್ಮಗುರು ರೆ.ಫಾ. ಥೋಮಸ್ ವಾರೆಕಾಟಿಲ್, ಉದ್ಯಮಿ ಉದಯ ಕುಮಾರ್ ಶೆಟ್ಟಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ನಾಯ್ಕ್ ಸದಸ್ಯರು ಮತ್ತು ವಾರ್ಷಿಕೋತ್ಸವದ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ರೋಸಮ್ಮ ಸೆಬಾಸ್ಟಿನ್ ಸ್ವಾಗತಿಸಿದರು ಮತ್ತು ಹಿರಿಯ ಶಿಕ್ಷಕಿ ಸುಮಲತಾ ಶೆಟ್ಟಿ ವರದಿ ವಾಚಿಸಿದರು, ಹೆರಿಯಣ್ಣ ಶೆಟ್ಟಿ ನಿರೂಪಿಸಿದರು
ಶಾಲಾ ವಿದ್ಯಾರ್ಥಿಗಳ ಹಾಗೂ ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ಪೂರ್ತಿ ರಾತ್ರಿ ನೆಡೆಯಿತು.