Site icon Kundapra.com ಕುಂದಾಪ್ರ ಡಾಟ್ ಕಾಂ

ಆನೆಗುಡ್ಡೆ: 21 ಸಾವಿರ ತೆಂಗಿನಕಾಯಿಯ ಮೂಡು ಗಣಪತಿ ಸೇವೆ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ 21 ಸಾವಿರ ತೆಂಗಿನಕಾಯಿ ಮೂಡು ಗಣಪತಿ ಸೇವೆ ನಡೆಯಿತು.

ಬ್ರಹ್ಮಾವರದ ನಿವಾಸಿ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಡಾ.ಮೇಜರ್ ವಂದನ ಬಿರ್ತಿ ಮತ್ತು ಶ್ರೀ ಡಾ. ಮೇಜರ್ ಪ್ರವರ್ಧನ ಬಿರ್ತಿ ಅವರು 21 ಸಾವಿರ ತೆಂಗಿನಕಾಯಿ ಮೂಡು ಗಣಪತಿ ಸೇವೆ ಸಲ್ಲಿಸಿದರು.

ದೇವಳದ ಆಡಳಿತ ಧರ್ಮದರ್ಶಿ ಕೆ. ರಮಣ ಉಪಾಧ್ಯಾಯ, ವಿಶ್ರಾಂತ ಧರ್ಮದರ್ಶಿ, ಸೂರ್ಯನಾರಾಯಣ ಉಪಾಧ್ಯಾಯ, ಕೆ.ನಿರಂಜನ ಉಪಾಧ್ಯಾಯ, ಕೆ. ವಿಠಲ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಶ್ರೀಶ ಉಪಾಧ್ಯಾಯ, ಮ್ಯಾನೇಜರ್ ನಟೇಶ್ ಕಾರಂತ್, ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು, ಅರ್ಚಕರು ಉಪಸ್ಥಿತರಿದ್ದರು.

ರವಿರಾಜ್ ಉಪಾಧ್ಯಾಯ, ಸುಬ್ರಹ್ಮಣ್ಯ ಉಪಾಧ್ಯಾಯ, ಶ್ರೀಧರ್ ಉಪಾಧ್ಯಾಯ ಅವರು ವಿಶೇಷ ಪೂಜಾ ಕೈಂಕರ್ಯದಲ್ಲಿ ಸಹಕರಿಸಿದ್ದರು.

Exit mobile version