Site icon Kundapra.com ಕುಂದಾಪ್ರ ಡಾಟ್ ಕಾಂ

ಮತ್ಸ್ಯಾಶ್ರಯ ಯೋಜನೆಯಡಿ ವಸತಿ ಸೌಲಭ್ಯ ಅರ್ಜಿ ಆಹ್ವಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ,ಜ.16:
ಮೀನುಗಾರಿಕೆ ಇಲಾಖೆಯ 2022-23 ನೇ ಸಾಲಿನಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ ವಸತಿ ಕಲ್ಪಿಸಲು ಬಿ.ಪಿ.ಎಲ್ ಅಥವಾ ಆರ್ಥಿಕವಾಗಿ ಹಿಂದುಳಿದ, ಸ್ವಂತ ನಿವೇಶನ ಹೊಂದಿರುವ, ಹುಟ್ಟಿನಿಂದ ಅಥವಾ ವೃತ್ತಿಯಲ್ಲಿ ಮೀನುಗಾರರಾಗಿರುವ, ವಿವಾಹಿತ, ವಿಧವೆ, ವಿಧುರ ಹಾಗೂ ಮೀನುಗಾರ ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಒಟ್ಟು 98 (ಸಾಮಾನ್ಯ-74, ಪ.ಜಾ-17,ಪ.ಪಂ-7) ಗುರಿಗಳನ್ನು ಸರ್ಕಾರದ ಆದೇಶದಂತೆ ನಿಗಧಿ ಪಡಿಸಿದ್ದು, ಈಗಾಗಲೇ ಒಟ್ಟು 47(ಸಾಮಾನ್ಯ -43, ಪ.ಜಾ-1, ಪ.ಪಂ-3)ಅರ್ಜಿಗಳು ಸ್ವೀಕೃತವಾಗಿದ್ದು, ಉಳಿದ 51 (ಸಾಮಾನ್ಯ-31, ಪ.ಜಾ-16, ಪ.ಪಂ-4) ಗುರಿಗಳಿಗೆ ಅರ್ಜಿ ಸಲ್ಲಿಸುವವರು ಆಯ್ಕೆ ಸಮಿತಿ ಅಧ್ಯಕ್ಷರ ಶಿಫಾರಸ್ಸು ಪತ್ರದೊಂದಿಗೆ ಪೂರಕ ದಾಖಲೆಗಳನ್ನು ಉಡುಪಿಯ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಉಡುಪಿ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Exit mobile version