Site icon Kundapra.com ಕುಂದಾಪ್ರ ಡಾಟ್ ಕಾಂ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಸತ್ಯನಾಥ ಸ್ಟೋರ್ಸ್‌ನಿಂದ 5700 ಜಿಲೇಬಿ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಸತ್ಯನಾಥ ಸ್ಟೋರ್ಸ್ ಬ್ರಹ್ಮಾವರ ಬಟ್ಟೆ ಮಳಿಗೆ ವತಿಯಿಂದ ಸಾರ್ವಜನಿಕರಿಗೆ 5700 ಜಿಲೇಬಿಗಳನ್ನು ಹಂಚಲಾಯಿತು.

ಮಳಿಗೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಜಿಲೇಬಿ ವಿತರಣೆ ಮಾಡಲಾಯಿತು. ಅಲ್ಲದೆ, ತೀರ್ಥಹಳ್ಳಿಯ ಸತ್ಯನಾಥ ಸ್ಟೋರ್ಸ್ ಬಟ್ಟೆ ಮಳಿಗೆ ವತಿಯಿಂದ ತೀರ್ಥಹಳ್ಳಿ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಸತ್ಯನಾಥ ಸ್ಟೋರ್ಸ್ ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪದಲ್ಲಿ ಬಟ್ಟೆ ಮಳಿಗೆ ಹೊಂದಿದೆ.

Exit mobile version