ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಯೋಧ್ಯೆ ಶ್ರೀ ರಾಮಲಲ್ಲಾ ಮೂರ್ತಿಯ ಪ್ರತಿಷ್ಠೆ ಅಂಗವಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವು ದೇವಸ್ಥಾನಗಳು, ರಾಮಮಂದಿರ ಮೊದಲಾದೆಡೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ಸಿಹಿ ಹಂಚುವಿಕೆ ಸೇರಿದಂತೆ ವಿವಿಧ ಕಾರ್ಯಕ್ರಗಳು ನಡೆದವು.
ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ವಿಶೇಷ ಅಲಂಕಾರ,ಮಹಾಪೂಜೆ ನಡೆಯಿತು. ಕುಂಭಾಸಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿರ್ಮಿಸಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮ ದೇವರ ಮೂರ್ತಿ ಹಾಗೂ ಶ್ರೀರಾಮ ದೇವರಿಗೆ ಆನೆಗುಡ್ಡೆಯಲ್ಲಿ ವಿಶೇಷ ಪೂಜೆ ನಡೆಯಿತು.ತದನಂತರ ಬೆಳ್ಳಿ ರಥೋತ್ಸವ ನಡೆಸಲಾಯಿತು.
ಕುಂದಾಪುರ ಬೈಂದೂರು ಕೋಟ ಮೊದಲಾದೆಡೆ ರಾಮೋತ್ಸವದ ಅಂಗವಾಗಿ ಮೆರವಣಿಗೆ ನಡೆಸಲಾಯಿತು.