ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಬೈಂದೂರು ಶಾಖೆಯಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಮಂಗಳವಾರ ಬೈಂದೂರು ಶಾಖೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಶ್ರೀರಾಮ್ ಫೈನಾನ್ಸ್ ಲಿ. ಉಡುಪಿ ಕ್ಲಸ್ಟರ್ ಹೆಡ್ ಸದಾಶಿವ ಅಮೀನ್ ಕಟ್ಟೆಗುಡ್ಡೆ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪ್ಪುಂದ ಮೂರ್ತೆದಾರರ ಸೇವಾ ವ್ಯವಸಾಯ ಸಹಕಾರಿ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ, ವಕೀಲ ರಾಮಚಂದ್ರ ನಾಯ್ಕ್, ಉದ್ಯಮಿಗಳಾದ ಕೃಷ್ಣ ಮದ್ದೋಡಿ, ತಮಸಿರ್, ಶ್ರೀರಾಮ್ ಫೈನಾನ್ಸ್‌ನ ಗಣಪತಿ ನಾಯ್ಕ್, ಕ್ಲಸ್ಟರ್ ಸೇಲ್ಸ್ ಹೆಡ್ ಸದಾನಂದ ಪೈ, ರಿಜಿನಲ್ ಹೆಡ್ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಶಾಖಾ ವ್ಯವಸ್ಥಾಪಕರಾದ ಮಹೇಶ್ ಪೂಜಾರಿ ಸ್ವಾಗತಿಸಿದರು. ಕರುಣಾಕರ ಕೆ. ಕಾರ್ಯಕ್ರಮ ನಿರೂಪಿಸಿದರು. ಭಟ್ಕಳ ಶಾಖಾ ವ್ಯವಸ್ಥಾಪಕರಾದ ರಾಘವೇಂದ್ರ ಸ್ವಾಮಿ ಇವರು ವಂದಿಸಿದರು. 130 ವಿದ್ಯಾರ್ಥಿಗಳಿಗೆ ತಲಾ 3500 ರೂ ನಂತೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.