Kundapra.com ಕುಂದಾಪ್ರ ಡಾಟ್ ಕಾಂ

ಚುನಾವಣಾ ರಸಪ್ರಶ್ನೆ ಸ್ಪರ್ಧೆ: ಆಲೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ಬೆಂಗಳೂರು ಮತ್ತು ಚಂದನ ವಾಹಿನಿ (ಡಾ. ನಾ. ಸೋಮೇಶ್ವರ ನೆಡೆಸುವ ಥಟ್ ಅಂತ ಹೇಳಿ) ಜಂಟಿಯಾಗಿ ನಡೆಸಿದ ಚುನಾವಣಾ ರಸಪ್ರಶ್ನೆಯಲ್ಲಿ ಆಲೂರು ಸರಕಾರಿ ಪ್ರೌಢಶಾಲೆಯ ವಿಧ್ಯಾರ್ಥಿಗಳಾದ ಗ್ರೀಷ್ಮ ಮತ್ತು ಪ್ರಜ್ಞಾ ಪ್ರಥಮ ಸ್ಥಾನಿಯಾಗಿದ್ದಾರೆ.

ತಾಲೂಕು, ಜಿಲ್ಲಾ ಮಟ್ಟದಲ್ಲಿ ಯು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ 33 ಜಿಲ್ಲೆಗಳ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದ ವಿಧ್ಯಾರ್ಥಿಗಳಾದ ಗ್ರೀಷ್ಮ ಮತ್ತು ಪ್ರಜ್ಞಾ ಅವರನ್ನು ಬೆಂಗಳೂರು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಚುನಾವಣಾ ಆಯುಕ್ತರಾದ ಮನೋಜ್ ಕುಮಾರ ಮೀನಾ, ಬಿ.ಬಿ.ಎಂ.ಪಿ ಆಯುಕ್ತರಾದ ತುಷಾರ್ ಗಿರಿನಾಥ್, ಆಪರ ಚುನಾವಣಾ ಆಯುಕ್ತರಾದ ಕೂರ್ಮರಾವ್, ವೆಂಕಟೇಶ ಕುಮಾರ ಉಪಸ್ಥಿತರಿದ್ದರು. ಈ ವಿಧ್ಯಾರ್ಥಿಗಳಿಗೆ ಶಿಕ್ಷಕ ಉದಯಕುಮಾರ ಶೆಟ್ಟಿ ತರಬೇತಿ ನೀಡಿದ್ದರು.ಶಿಕ್ಷಕಿ ಅಮ್ರತಾ ಸಹಕರಿಸಿದರು.

Exit mobile version