Kundapra.com ಕುಂದಾಪ್ರ ಡಾಟ್ ಕಾಂ

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಕ್ತದಾನ ಶಿಬಿರ: 67 ಯುನಿಟ್ ರಕ್ತ ಸಂಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜೈ ಶಿವಾಜಿ ಸೇವಾ ಟ್ರಸ್ಟ್ ರಿ. ಹಟ್ಟಿಕುದ್ರು ಹಟ್ಟಿಯಂಗಡಿ, ಶ್ರೀ ಮಹಾಗಣಪತಿ ಯುವಕ ಮಂಡಲ ಹಟ್ಟಿಕುದ್ರು, ಶ್ರೀ ಕೃಷ್ಣ ಪೈಪ್ ಇಂಡಸ್ಟ್ರೀಸ್ ಹಟ್ಟಿಯಂಗಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಆಶ್ರಯದಲ್ಲಿ ಹಟ್ಟಿಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರುಗಿತು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಿ. ಕುಂದಾಪುರದ ಸಭಾಪತಿಗಳಾದ ಜಯಕರ್ ಶೆಟ್ಟಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾ ಗೋವಿಂದ ಬಾಬು ಪೂಜಾರಿ, ಜಯಸೂರ್ಯ ಪೂಜಾರಿ, ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್, ಸಂತೋಷ್ ಹಟ್ಟಿಕುದ್ರು,ಕೃಷ್ಣಯ್ಯ ಪೂಜಾರಿ, ನರೇಂದ್ರ ಉಡುಪ ಹಟ್ಟಿಕುದ್ರು, ಸುಮಂತ್ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರತಿ ದಿನ ಪ್ರತಿ ಕ್ಷಣ ದಿನದ 24 ಗಂಟೆ ವರ್ಷದಲ್ಲಿ 365 ದಿನ ಉಡುಪಿ ಕುಂದಾಪುರ ಮಣಿಪಾಲ ಮಂಗಳೂರು ಭಾಗದಲ್ಲಿ ದಿನ ನಿತ್ಯ ರೋಗಿಗಳ ರಕ್ತದ ತುರ್ತು ಕರೆಗೆ ಸಕಾಲದಲ್ಲಿ ಸ್ಪಂದಿಸಿ ವಿವಿಧ ಗ್ರೂಪ್ ನ ರಕ್ತದಾನಿಯನ್ನು ವಿವಿಧ ಆಸ್ಪತ್ರೆಗಳಿಗೆ ಪೂರೈಸಿ ಹಲವು ರೋಗಿಗಳ ಪಾಲಿಗೆ ಸಂಜೀವಿಗಳಾದ ಅಭಯಹಸ್ತ ಉಡುಪಿ ಸಂಸ್ಥೆಯ ಸದಸ್ಯರುಗಳಾದ ಸುಕೇಶ್ ನಾಯ್ಕ್ ಕುಂದಾಪುರ, ಶರತ್ ಕಾಂಚನ್ ಆನಗಳ್ಳಿ ಪ್ರಶಾಂತ್ ತಲ್ಲೂರು ಹಾಗೂ ದಿನೇಶ್ ಕಾಂಚನ್ ಬಾರಿಕೇರೆ ಇವರುಗಳನ್ನು ಸನ್ಮಾನಿಸಲಾಯಿತು.

ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 67 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Exit mobile version