ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಯಡ್ತರೆ ರಾಹುತನಕಟ್ಟೆಯ ಶ್ರೀ ರಾಮ ಭಜನಾ ಮಂಡಳಿಯಿಂದ ವರ್ಷಂಪ್ರತಿ ನಡೆಯುವ ಅಖಂಡ ಶ್ರೀ ರಾಮ ಭಜನಾ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.

ರಾಹುತನಕಟ್ಟೆಯ ಶ್ರೀ ರಾಹುತನ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಜರುಗುವ ಅಖಂಡ ರಾಮ ಭಜನೆಯಲ್ಲಿ ಪ್ರದೀಪ ಸ್ಥಾಪನೆಯೊಂದಿಗೆ ಸ್ಥಳೀಯ ಹಾಗೂ ಸುತ್ತಲಿನ ಭಜನಾ ತಂಡಗಳು ಸಂಗೀತ ಹಾಗೂ ವಾದ್ಯತಂಡದೊಂದಿಗೆ ವಿವಿಧ ಭಜನೆ ಪ್ರಸ್ತುತಗೊಳಿಸಿದರು.
ರಾಮಭಜನೆಯ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಈ ವೇಳೆ ಜರುಗಿದವು. ಈ ವೇಳೆ ಅಧ್ಯಕ್ಷರಾದ ಚಂದ್ರ ಮೊಗವೀರ, ಕಾರ್ಯದರ್ಶಿ ನಾಗರಾಜ ಮೊಗವೀರ ಸೇರಿದಂತೆ ಶ್ರೀ ರಾಮ ಭಜನಾ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.