Kundapra.com ಕುಂದಾಪ್ರ ಡಾಟ್ ಕಾಂ

ಜೆಇಇ ಮೈನ್ ಫಲಿತಾಂಶ: ಎಕ್ಸಲೆಂಟ್ ಕುಂದಾಪುರ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜನವರಿ 2024ರಲ್ಲಿ ನಡೆದ ಜೆಇಇ ಮೈನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಸಂಸ್ಥೆಯಲ್ಲಿ ಜೆಇಇ ತರಬೇತಿ ಪಡೆದ 20 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಅಧಿಕ ಅಂಕಗಳಿಸಿ ವಿಶೇಷ ಸಾಧನೆಗೈದಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ಈಶಾ ಶೆಟ್ಟಿ 98.63, ಚಿರಾಗ್ ವಿನಾಯಕ ಮಹಲೆ 97.66, ಎಂ. ಸೃಜನ್ 95.82, ಗೌರವ್ 95.64, ನಿಶಾ 94.50, ನಾಗರಾಜ್ ಸಿದ್ಧಪ್ಪಾ ಉಪ್ಪಾರ್ 94.35, ಸನ್‌ಮಾನ್ 94.11, ವರುಣ್ ಕೆ ಪಿ 92.58, ಸಮರೇಶ್ 92.40, ರೋಹಿತ್ ಆರ್ ಪೂಜಾರಿ 91.28, ಧನುಷ್ 91.23, ಶಶಾಂಕ್ ಶೆಟ್ಟಿ 91.11, ಪ್ರೀತಮ್ ಶೆಟ್ಟಿ 90.73, ನಿರ್ಮಿತಾ ಎನ್. ಡಿ 90.61, ಅನಿರುದ್ಧ್ ಎಸ್ ಹತ್‌ವಾರ್ 90.54, ವಿನುತಾ 90.46 ಶೇಕಡಾ ಅಂಕಗಳನ್ನು ಗಳಿಸಿ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ.

ಎಕ್ಸಲೆಂಟ್ ಕುಂದಾಪುರ ಸಂಸ್ಥೆಯಲ್ಲಿ ಸರ್ಧಾತ್ಮಕ ಪರೀಕ್ಷೆಗಳಾದ ಜೆಇಇ/ನೀಟ್ ಪರೀಕ್ಷೆಗೆ ದೇಶದ ನಾನಾ ಭಾಗಗಳಿಂದ ತರಬೇತುದಾರರು ಆಗಮಿಸಿ ತರಬೇತಿ ನೀಡುವುದರಲ್ಲಿ ಅನುಭವಿ ಭೋಧಕ ಸಿಬ್ಬಂದಿ ವರ್ಗದವರು ಪ್ರತಿ ದಿನ ವಿದ್ಯಾರ್ಥಿಗಳಿಗೆ ಜೆಇಇ/ನೀಟ್ ತರಬೇತಿ ನೀಡಿ ಅವರನ್ನು ರಾಷ್ಟಿçÃಯ ಮಟ್ಟದ ಪರೀಕ್ಷೆಗಳಿಗೆ ಸಿದ್ಧ ಗೊಳಿಸುವುದು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ.

ಬೋಧಕ ಸಿಬ್ಬಂದಿ ವರ್ಗದವರಿಗೂ ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಎಂ.ಎಂ. ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿರುವ ಎಂ.ಮಹೇಶ್ ಹೆಗ್ಡೆ ಹಾಗೂ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version