ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಸ್ರೂರು ವಲಯದ ಕಂಡ್ಲೂರು ಕಾರ್ಯಕ್ಷೇತ್ರದಲ್ಲಿ ಸುತಾರ ಕೆರೆಯನ್ನು ಆಯ್ಕೆ ಮಾಡಿದ್ದು, ಕೆರೆ ಅಂಗಳದಲ್ಲಿ ಈ ದಿನ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಯೋಜನೆಯ ಪ್ರಾದೇಶಿಕ ಕಚೇರಿಯ ತಪಾಸಣಾ ವಿಭಾಗದ ಯೋಜನಾಧಿಕಾರಿ ಅಮರ್ ಪ್ರಸಾದ್ ಅವರು ಶುಭ ಹಾರೈಸಿ ಗುದ್ದಲಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಅಧ್ಯಕ್ಷರು ದಿನಕರ ಆಚಾರ್, ಕಂಡ್ಲೂರು ಒಕ್ಕೂಟದ ಅಧ್ಯಕ್ಷರಾದಂತಹ ಗೌರಿ ಆರ್. ಶ್ರೀಯನ್, ಕಾವ್ರಾಡಿ ಒಕ್ಕೂಟ ಅಧ್ಯಕ್ಷರಾದ ಶಂಕರ್ ಆಚಾರ್, ನೇತಾಜಿ ಶಾಲೆಯ ಸಂಚಾಲಕರು ಹಾಗೂ ಕೆರೆ ಸಮಿತಿಯ ಗೌರವ ಅಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿ, ಕುಂದಾಪುರ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್, ಬಸ್ರೂರಿನ ಸಂಜು ಮೇಸ್ತ್ರಿ, ಕೆರೆ ಸಮಿತಿಯ ಉಪಾಧ್ಯಕ್ಷರು, ಖಜಾಂಜಿ, ಕೆರೆ ಸಮಿತಿಯ ಸದಸ್ಯರು, ಸ್ಥಳೀಯ ಸೇವಾಪ್ರತಿನಿಧಿಗಳು, ಹಿಟಾಚಿ ಡ್ರೈವರ್, ಕಾವ್ರಾಡಿ ಒಕ್ಕೂಟದ ಹಾಗೂ ಕಂಡ್ಲೂರು ಒಕ್ಕೂಟದ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

