Kundapra.com ಕುಂದಾಪ್ರ ಡಾಟ್ ಕಾಂ

ಸಾಮಾಜಿಕ ಅಭಿವೃದ್ಧಿಗಾಗಿ, ಸ್ವಾವಲಂಬಿ ಜೀವನಕ್ಕಾಗಿ ಪಿ.ಎಂ. ವಿಶ್ವಕರ್ಮ ಯೋಜನೆ: ಸಂಸದ ಬಿ. ವೈ. ರಾಘವೇಂದ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಮರ್ಥ ಭಾರತ ಸಮೃದ್ಧ ಬೈಂದೂರು ಘೋಷವಾಕ್ಯದಡಿ ಉಡುಪಿ ಜಿಲ್ಲಾ ಭಾರತೀಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ರಿ.) ಹಾಗೂ ಶ್ರಮ್ ಚಾರಿಟೇಬಲ್ ಟ್ರಸ್ಟ್(ರಿ.) ಇವರ ಜಂಟಿ ಆಶ್ರಯದಲ್ಲಿ ಬೈಂದೂರಿನ ಜೆ.ಎನ್.ಆರ್ ಕಲಾ ಮಂದಿರದಲ್ಲಿ “ಕಾರ್ಮಿಕರ ಸಮಾವೇಶ” ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಬಿ. ವೈ. ರಾಘವೇಂದ್ರ ಅವರು, ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶ್ರಮಿಕ ವರ್ಗದ ಬಾಂಧವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಾಗೂ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಜಾರಿಗೆ ತಂದಿರುವ ಬಹುಮಹತ್ವಾಕಾಂಕ್ಷೆ ಯೋಜನೆಯಾದ ಪಿ.ಎಂ. ವಿಶ್ವಕರ್ಮ ಯೋಜನೆಯ ಕುರಿತು ವಿಚಾರ ವಿನಿಮಯ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ, ಶ್ರಮ್ ಚಾರಿಟೇಬಲ್ ಟ್ರಸ್ಟ್ ಸಂಚಾಲರಾದ ಮೋಹನ್ ಚಂದ್ರ ಅವರು, ಟ್ರಸ್ಟ್ ಅಧ್ಯಕ್ಷರಾದ ಸಂತೋಷ್ ಅವರು, ಪಿ. ಎಂ. ವಿಶ್ವಕರ್ಮ ಸಮಿತಿಯ ಅಧ್ಯಕ್ಷರಾದ ವಾರಿಜ, ಸಮೃದ್ಧ ಬೈಂದೂರು ಸಂಚಾಲಕ ಬಿ. ಎಸ್. ಸುರೇಶ್ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Exit mobile version