ಪಾಕ ಪ್ರವೀಣೆ: ಅರ್ಚನ ಬೈಕಾಡಿ.
ಹಬ್ಬಗಳು ಬಂತೆಂದರೆ ಸಾಕು ಹಲವಾರು ಬಗೆಯ ಸಿಹಿತಿಂಡಿಗಳು ನೆನಪಾಗುತ್ತವೆ. ಪ್ರತಿ ಹಬ್ಬಕ್ಕೂ ಮನೆಯಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಸಂಭ್ರಮಿಸಲಾಗುತ್ತದೆ. ಈ ಸಂದರ್ಭದಲ್ಲಿ ತಯಾರಿಸಬಹುದಾದ ಸಿಹಿತಿಂಡಿ ದೂದ್ ಪೇಡ. ಸಾಂಪ್ರದಾಯಿಕವಾಗಿ, ದೂದ್ ಪೇಡಾ ಅಥವಾ ಹಾಲಿನ ಪೇಡವನ್ನು ಸಕ್ಕರೆ ಮತ್ತು ಹಾಲಿನ ಕೋಯಾದಿಂದ ತಯಾರಿಸಲಾಗುತ್ತದೆ. ಆದರೆ ಈಗಿನ ವೇಗದ ಜಗತ್ತಿನಲ್ಲಿ ಎಲ್ಲರಿಗೂ ಸುಲಭದ ವಿಧಾನವೇ ಬೇಕಲ್ಲವೇ? ಹೌದು ನನ್ನ ಈ ಪೇಡದ ವಿಧಾನವು ತ್ವರಿತವಾಗಿ ಮಾಡಬಹುದಾದ ಎಂದೇ ಹೇಳಬಹುದು. ಬನ್ನಿ ಸುಲಭವಾಗಿ ದೂದ್ ಪೇಡದ ಮಾಡುವ ವಿದಾನವನ್ನು ತಿಳಿಯೋಣ.
ಸಾಮಗ್ರಿಗಳು:
• 1 ಕ್ಯಾನ್ ಕಂಡೆನ್ಸ್ಡ್ ಹಾಲು (15 ಒಜ್ – 395gm)
• 1 ಕಪ್ ಹಾಲಿನ ಪುಡಿ
• 1 ಚಮಚ ತುಪ್ಪ / ಬೆಣ್ಣೆ
• 3-4 ಏಲಕ್ಕಿ
• 10-15 ಬಾದಾಮಿ ಅಥವಾ ಗೋಡಂಬಿ ಬೀಜಗಳು
ದೂದ್ ಪೇಡಾ ಮಾಡುವುದು ಹೇಗೆ?
1. ಮೊದಲನೆಯದಾಗಿ, ಬಾದಾಮಿಯನ್ನು ಸಣ್ಣಗೆ ಕತ್ತರಿಸಿ ಹಾಗು ಏಲಕ್ಕಿಯನ್ನು ಸಹ ಪುಡಿ ಮಾಡಿ ಇಡಿ.
2. ಬೆಂಕಿ ಹಚ್ಚುವ ಮುನ್ನ ಹಾಲಿನ ಹುಡಿ ಹಾಗು ಕಂಡೆನ್ಸ್ದ್ ಹಾಲನ್ನು ಸಂಪೂರ್ಣವಾಗಿ ಬೆರೆಸಿ. ದಪ್ಪಅಡಿ ಪ್ಯಾನಲ್ಲಿ ಕಂಡೆನ್ಸ್ದ್ ಹಾಲು ಮತ್ತು ಹಾಲಿನ ಪುಡಿ ಸೇರಿಸಿ.
3. ಆನಂತರ, ಕಡಿಮೆ ಪ್ರಮಾಣದ ಉರಿಯಲ್ಲಿ ಕಲಿಸಿರಿ. ಏಲಕ್ಕಿಪುಡಿ ಸೇರಿಸಿ ಮತ್ತೆ ಕಲಿಸುತ್ತಾ ಇರಿ.
4. ಪ್ಯಾನ್ ಬದಿ ಬಿಡಲು ಪ್ರಾರಂಭವಾಗುತನಕ ಕಲಿಸುತ್ತಾ ಇರಿ. ಕತ್ತರಿಸಿದ ಬಾದಾಮಿ ಹಾಗು ಗೋಡಂಬಿ ಅಥವಾ ನಿಮ್ಮ ಆಯ್ಕೆಯ ಯಾವುದೇ ಒಣ ಹಣ್ಣುಗಳನ್ನು ಸೇರಿಸಿ.
5. ಪ್ಯಾನ್ ಬದಿ ಬಿಡಲು ಪ್ರರಂಬಿಸ್ದಾಗ ಒಂದು ಚಮಚ ತುಪ್ಪ ಸೇರಿಸಿ ಕಲಿಸಿರಿ. ಒಂದು ಗಟ್ಟಿ ಮುದ್ದೆ ಆಗುವತನಕ ಕಲಿಸಿರಿ.
6. ಚೆಂಡನ್ನು ರೂಪಿಸಲು ಸಾಧ್ಯವಾಗಬೇಕು ಅಲ್ಲಿಯವರೆಗೂ ಕಡಿಮೆ ಪ್ರಮಾಣದ ಉರಿಯಲ್ಲಿ ಕಲಿಸುತ್ತಾ ಇರಬೇಕು.
(ಒಂದು ಸಣ್ಣ ಪ್ರಮಾಣದ ಹಿಟ್ಟನು ತೆಗೆದುಕೊಂಡು ಪರಿಶೀಲಿಸಲು ಪ್ರಯತ್ನಿಸಿ. ನುಣ್ಣಗೆ ಉಂಡೆ ಮಾಡಲು ಬಂದೆರೆ ಸಾಕು. ಇದು ಸರಿಯಾದ ಹಂತ.)
7. ಸ್ವಿಚ್ ಆಫ್ ಮಾಡಿ. 5 ನಿಮಿಷಗಳ ಅವಕಾಶ ನಂತರ ಸ್ವಲ್ಪ ಬೆಚ್ಚಗಿದ್ದಾಗಲೇ ಉಂಡೆ ಕಟ್ಟಲು ಪ್ರಾರಂಬಿಸಿ. ಉಂಡೆ ಕಟ್ಟುವ ಮುನ್ನ ಕೈಗಳನ್ನು ತುಪ್ಪದಿಂದ ಗ್ರೀಸ್ ಮಾಡಿಕೊಳ್ಳುವುದನ್ನು ಮರೆಯದಿರಿ. ಉಂಡೆಯಾ ಆಕರ ಬಂದನಂತರ, ಅದನ್ನು ಒತ್ತಿ ಪೇಡದ ಆಕಾರಕ್ಕೆ ತನ್ನಿ.
8. ಮದ್ಯದಲ್ಲಿ ಒಂದು ಸಣ್ಣ ಗಚ್ಚು ಮಾಡಿ ಬಾದಾಮಿ ಇಡಿ ಮತ್ತು ಒಂದು ಸ್ವಚದಾದ ಪ್ಲೇಟಿನಲ್ಲಿ ಅಲಂಕರಿಸಿ.
9. ಹಾಲಿನ ಪೇಡ ಆಕಾರ ಮತ್ತು ರುಚಿ ಒಂದು ಗಂಟೆ ನಂತರ ಪರಿಪೂರ್ಣ ಪಡೆಯುತ್ತದೆ. ಬಿಸಿ ಇರುವಾಗ ಸ್ವಲ್ಪ ಅಂಟು- ಆಂಟಾಗಿ ಇರುತ್ತದೆ.
10. ತಣ್ಣಗಾದನಂತರ ಏರ್ ಟೈಟ್ ಕಂಟೇನರ್ ನಲ್ಲಿ ಶೇಕರಿಸಿಡಿ, ಸುಮಾರು 10-15 ದಿನಗಳ ಕಾಲ ತಾಜಾ ಆಗಿರುತ್ತದೆ.
ಸಲಹೆಗಳು:
1 ಬೆಚ್ಚಗಿನ ಹಾಲಿನಲ್ಲಿ ಕೇಸರಿಯನ್ನು ನೆನಸಿ; ಎರಡನೆಯ ಹಂತದ ಮಿಶ್ರಣಕ್ಕೆ ಸೇರಿಸಿ. ಒಳ್ಳೆ ಬಣ್ಣ ಮತ್ತು ಕೇಸರಿ ಪರಿಮಳ ಬರುತದೆ.
2 ಹಾಲಿನ ಪುಡಿ ಸಣ್ಣಗೆ ಹಾಗು ನಯವಾಗಿ ಇದ್ದರೆ, ಪೇಡದ ಆಕಾರ ಚೆನ್ನಾಗಿ ಬರುತ್ತ್ತದೆ.
3 ಒಂದುವೇಳೆ ಮಿಶ್ರಣ ತುಂಬಾ ಗಟ್ಟಿ ಆದರೆ, ಉಂಡೆ ಮಾಡುವಾಗ ಸ್ವಲ್ಪ ಹಾಲನು ಹಾಕಿ ಬೆರೆಸಿರಿ. ಆದರೆ ಇದು ತುಂಬಾ ಕಾಲ ಉಳಿಯುವುದಿಲ್ಲ.
4 ಜಿಗುಟುತನವನ್ನು ತಪ್ಪಿಸಲು ಹಾಗು ಒಳ್ಳೆಯ ಆಕಾರ ಮತ್ತು ಹೊಳಪು ತರಲು, ತುಪ್ಪದಿಂದ ಕೈಯನ್ನು ಗ್ರೀಸ್ ಮಾಡಿಕೂಂದು ಪೇಡ ಕಟ್ಟಿರಿ
5 ಒಂದು ಗಂಟೆ ಕಾಲ ತಣ್ಣಗಾಗಲು ಇಡಿ. ಇಲ್ಲದಿದರೆ, ತುಂಬಾ ಹಸಿ ಇರುತ್ತದೆ.
6 ಯಾವಾಗಲೂ ಅಡಿ ಹಿಡಿಯುವುದರಿಂದ ತಪ್ಪಿಸಲು ಕಡಿಮೆ ಉರಿಯಲ್ಲಿ ಬೇಯಿಸಿ. ನೋನ್-ಸ್ಟಿಕ್ ಪಾತ್ರೆಯಿಂದ ನಿಮ್ಮ ಕೆಲಸ ಸುಲಭವಾಗಿಸುತ್ತದೆ.
7 ಒಣ ಮತ್ತು ತಂಪಾದ ಸ್ಥಳದಲ್ಲಿ ಶೇಖರಿಸಿ. ಸುಮಾರು ಒಂದು ವಾರ ಚೆನ್ನಾಗಿ ಬರುತ್ತದೆ