Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ: ಶಿಖರ ಸ್ಥಾಪನೆ, ದೇಗುಲ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಗವಂತನಿಗೆ ಯಾರಲ್ಲಿ ಏನಿಲ್ಲ, ಏನು ಕೊಡಬೇಕು ಎನ್ನೋದು ಗೊತ್ತಿರುತ್ತದೆ. ಭಗವಂತನಲ್ಲಿ ಬೇಡುವುದಾದರೆ ಜ್ಞಾನಕೇಳು. ಆಧ್ಯಾತ್ಮ ದಾರಿಯಲ್ಲಿ ಸಾಗಿದರೆ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ. ಚಿಕ್ಕವಯಸ್ಸಲ್ಲಿ ಮಕ್ಕಳಿಗೆ ಆಧ್ಯಾತ್ಮ ದಾರಿಯಲ್ಲಿ ಸಾಗುವಂತೆ ನೋಡಿಕೊಂಡರೆ ಮುಂದೆ ಸಮಾಜಕ್ಕೆ ಉತ್ತಮ ಕೊಡುಗೆ ಆಗುತ್ತಾರೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠ ಕಿರಿಯ ಯತಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಹಟ್ಟಿಯಂಗಡಿ ದಿ.ರಾಮಚಂದ್ರ ಭಟ್ ಸಂಕಲ್ಪದಂತೆ ಅವರ ಮಕ್ಕಳು ಹಾಗೂ ಭಕ್ತರ ಸಹಕಾರದಲ್ಲಿ ನಿರ್ಮಿಸಿದ ಹಟ್ಟಿಯಂಗಡಿ ನೂತನ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಲೋಕಾರ್ಪಣೆ, ಶಿಖರ ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಮನುಷ್ಯರ ಸ್ವಭಾವ ಒಂದೇತರನಾಗಿರದೆ ಶ್ರದ್ದೆ ಹೊರಟುಹೋಗುತ್ತದೆ. ಭಗವಂತನಲ್ಲಿ ಸ್ಥಿರವಾದ ಭಕ್ತಿ ಬೇಡು. ಜ್ಞಾನ ಕೊಡುವವನು ಭಗವಂತನಾಗಿದ್ದರಿಂದ ವಿದ್ಯೆ ಕರುಣಿಸುವಂತೆ ಬೇಡು. ಐಶ್ವರ್ಯ, ವಿದ್ಯೆ, ಧನಕನಕ ಎಲ್ಲವನ್ನೂ ಕೊಟ್ಟ ದೇವರ ದರ್ಶನ ಮಾಡುವುದಕ್ಕೆ ಬರುವ ಭಕ್ತರಿದ್ದು, ಭಗವಂತನಿಗೆ ಎಲ್ಲಾ ಗೊತ್ತಿದ್ದು, ಕೊಡುವುದನ್ನು ಕೊಟ್ಟೇಕೊಡುತ್ತಾನೆ. ದೇವಸ್ಥಾನ ದೇವರ ದರ್ಶನ ಮಾಡುವುದು ಎಲ್ಲವನ್ನೂ ಕೊಟ್ಟ ಭಗವಂತಿಬಗೆ ಕೃತಜ್ಞತೆ ಸಲ್ಲಿಸುವುದಷ್ಟೇ ಆಗಿರಬೇಕು ಎಂದು ಹೇಳಿದರು.

ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ಕ್ಷೇತ್ರ ಭಕ್ತರ ಇಷ್ಠಾರ್ಥ ಪೂರೈಸುವ ಸಿದ್ದಿಕ್ಷೇತ್ರವಾಗಿದೆ. ಕ್ಷೇತ್ರ ನೂತನ ದೇವಸ್ಥಾನ ಶ್ರೀಮಂತವಾಗಿದ್ದು, ಭಕ್ತರ ಇಷ್ಟಾರ್ಥ ಪೂರೈಸುವುದಕ್ಕೆ ಮತ್ತಷ್ಟು ಶಕ್ತಿ ತುಂಬಿದಂತೆ ಆಗಿದ್ದು, ಈ ಕ್ಷೇತ್ರ ಮತ್ತಷ್ಟು ಶಕ್ತಿ ಹಾಗೂ ಪ್ರಸಿದ್ದಿ ಪಡೆಯಲಿದೆ. ತ್ರಿಕರ್ಣ ಶುದ್ಧಿಯಂದ ದೇವರ ಬೇಡಿದರೆ ಭಗವಂತ ವರಕೊಡುತ್ತಾನೆ ಎಂದರು.

ಬೆಳಗ್ಗೆ ಹಟ್ಟಿಯಂಗಡಿ ಆಗಿಮಿಸಿದ ಶ್ರೀ ವಿಧುಶೇಖರ ಸ್ವಾಮೀಜಿ ಅವರ ಪೂರ್ಣಕುಂಭ ಸ್ವಾಗತದಲ್ಲಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಸಿದ್ದಿವಿನಾಯಕ ದೇವರಿಗೆ ಅಭಿಷೇಕ ನೆರವೇರಿಸಿದ ಸ್ವಾಮೀಜಿ ಐದು ಕಲಶ ಸ್ಥಾಪನೆ ಮಾಡಿ, ಯಾಗಶಾಲೆಯಲ್ಲಿ ನಡೆಯುತ್ತಿದ್ದ ಲಕ್ಷಮೋದಕ ಹವನಕ್ಕೆ ಪೂಣಾಹುತಿ ಅರ್ಪಿಸಿ ಭಕ್ತರಿಗೆ ಮಂತ್ರಾಕ್ಷತೆ ವಿತರಿಸಿ, ನಂತರ ಆಶೀರ್ವಚನ ನೀಡಿದರು.

ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿ ಹೆಚ್.ಬಾಲಚಂದ್ರ ಭಟ್ ನೇತ್ರಾವತಿ ಬಿ.ಭಟ್ ದಂಪತಿ ಸ್ವಾಮೀಜಿ ಪಾದಪೂಜೆ ನೆರವೇರಿಸಿದರು.

ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಹೆಚ್.ಬಾಲಚಂದ್ರ ಭಟ್ ಮಾತನಾಡಿ ಹಟ್ಟಿಯಂಗಡಿ ನೂತನ ದೇವಸ್ಥಾನ ಲೋಕಾರ್ಪಣೆ ಧನ್ಯತಾ ಭಾವ ಮೂಡಿಸಿದೆ. ದಿ.ರಾಮಚಂದ್ರ ಭಟ್ ಸಂಕಲ್ಪ, ಸಾಗರ ಮಾಜಿ ಶಾಸಕ ದಿ.ಎಲ್.ಟಿ.ಹೆಗ್ಡೆ ಕನಸು, ಧಾರ್ಮಿಕ ಮಾರ್ಗದರ್ಶಕ ದ್ವಾರಕಾನಾಥ ಮಾರ್ಗದರ್ಶನಲ್ಲಿ ಸಾಕಾರಗೊಂಡಿದೆ. ಗಜಪುಷ್ಠಾಕಾರದ ದೇವಸ್ಥಾನ ಮೂರುತಿಂಗಳಲ್ಲಿ ಫೂರ್ಣವಾಗಿದೆ ಎಂದರೆ ಅದಕ್ಕೆ ವಿನಾಯಕನ ಪ್ರೇರಣೆ ಕಾರಣ. ಹಟ್ಟಿಯಂಗಡಿ ಭಕ್ತರ ಇಷ್ಟಾರ್ಥ ಈಡೇರಿಸುವುದಕ್ಕೆ ಸ್ವಾಮೀಜಿ ಅನುಗ್ರಹಸಬೇಕು.

ಶ್ರೀ ಸಿದ್ದಿವಿನಾಯಕ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಲ್.ಟಿ. ತಿಮ್ಮಪ್ಪ ಹೆಗ್ಡೆ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಕುಂದೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಬೆಂಗಳೂರು ಧಾರ್ಮಿಕ ಮಾರ್ಗದರ್ಶಕ ದ್ವಾರಕಾನಾಥ್, ರಮಾದೇವಿ ಆರ್. ಭಟ್, ನೇತ್ರಾವತಿ, ಬಿ. ಭಟ್, ವೀಣಾ ರಶ್ನಿ ಎಸ್.ಕುಮಾರ್ ಮುಂತಾದವರು ಇದ್ದರು.

ಶೃಂಗೇರಿ ಶಾರದಾ ಪೀಠ ಪ್ರಾಂತೀಯ ಪ್ರತಿನಿಧಿ ಲೋಕೇಶ ಅಡಿಗ ಸ್ವಾಗತಿಸಿದರು. ಸಿದ್ದಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ ಕುಮಾರ ಸ್ವಾಗತಿಸಿದರು. ಶ್ರೀ ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿ ಬಾಲಚಂದ್ರ ಭಟ್ ಪ್ರಾಸ್ತಾವಿಕ ಮಾತನಾಡಿದರು.

Exit mobile version