Site icon Kundapra.com ಕುಂದಾಪ್ರ ಡಾಟ್ ಕಾಂ

ಜೆ.ಇ.ಇ. ಮೈನ್ಸ್‌ ಬಿ. ಆರ್ಕ್‌ ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಾರ್ಕಳ:
ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿ (NTA) ವತಿಯಿಂದ ನಡೆಸಲ್ಪಟ್ಟ ಜೆ.ಇ.ಇ. ಮೈನ್ಸ್‌ ಬಿ. ಆರ್ಕ್‌ (B.Arch) ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ರಾಷ್ಟ್ರ ಮಟ್ಟದ ಬ್ಯಾಚುಲರ್‌ ಆಫ್‌ ಆರ್ಕಿಟೆಕ್ಚರ್‌ -2024 ರ ಪ್ರಥಮ ಹಂತದ ಪರೀಕ್ಷೆಯಲ್ಲಿ ದುರ್ಗಾಶ್ರೀ ಎಂ 99.1312779 ಪರ್ಸಂಟೈಲ್‌, ಆದಿತ್ಯ ಅಲಗೌಡ ಪಾಟೀಲ್‌ 98.5573008, ಪವನ್‌ ಕೆ. ಎಸ್‌ 96.1256545 ಪರ್ಸಂಟೈಲ್‌ ಗಳಿಸಿದ್ದಾರೆ.

ಅದರಂತೆಯೇ ಜೆ.ಇ.ಇ ಮೈನ್ಸ್‌ ಬಿ ಪ್ಲಾನಿಂಗ್‌ ನಲ್ಲಿ ಸಾನ್ವಿಕುಮಾರ್‌ 92.7239106, ಸಚೇತ್‌ ದಯಾನಂದ ಬಿ. ಎಸ್‌ 85.7935359 ಪರ್ಸಂಟೈಲ್‌ ಪಡೆದಿದ್ದಾರೆ.

ಎಂಟು ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸಂಟೈಲ್‌, ಹನ್ನೊಂದು ವಿದ್ಯಾರ್ಥಿಗಳು 85 ಕ್ಕಿಂತ ಹೆಚ್ಚು ಪರ್ಸಂಟೈಲ್‌ , ಹದಿನೇಳು ವಿದ್ಯಾರ್ಥಿಗಳು 80 ಕ್ಕಿಂತ ಹೆಚ್ಚು ಪರ್ಸಂಟೈಲ್‌ ಗಳಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ನಡೆದ ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿಯೂ ಕ್ರಿಯೇಟಿವ್ ನ 26 ವಿದ್ಯಾರ್ಥಿಗಳು 97 ಕ್ಕಿಂತ ಹೆಚ್ಚು ಪರ್ಸಂಟೈಲ್ ಗಳಿಸಿರುವುದನ್ನು ಗಮನಿಸಬಹುದಾಗಿದೆ.

ಸಾಧಕ ವಿದ್ಯಾರ್ಥಿಗಳಿಗೆ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಬಿ. ಆರ್ಕ್‌ ಸಂಯೋಜಕರಾದ ಸುಮಂತ ದಾಮ್ಲೆ ಅಭಿನಂದನೆ ಸಲ್ಲಿಸಿದ್ದಾರೆ.

Exit mobile version