ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೊಂದ ಬಿಜೆಪಿ ಕಾರ್ಯಕರ್ತರ ಧ್ವನಿಯಾಗಿ, ಪಕ್ಷದ ಆಂತರಿಕ ಸಮಸ್ಯೆಯನ್ನು ಶುದ್ದೀಕರಣಗೊಳಿಸಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುವುದೇ ನನ್ನ ಗುರಿ. ಯಾರೇ ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಬೈಂದೂರು ಉಪ್ಪುಂದ ಪರಿಚಯ ಹೋಟೆಲ್ ದೇವಕಿ ಸಣ್ಣಯ ಸಭಾಂಗಣದಲ್ಲಿ ಬೈಂದೂರಿನ ರಾಷ್ಟ್ರಭಕ್ತರ ಬಳಗ ಆಯೋಜಿಸಿದ ಬೈಂದೂರು ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ
ರಾಜ್ಯದಲ್ಲಿ ಯಡಿಯೂರಪ್ಪನವರ ಕಾರಣದಿಂದಾಗಿ ಬಿಜೆಪಿ ಹೊಂದಾಣಿಕೆ ರಾಜಕಾರಣ ನಡೆಸುತ್ತಿದೆ. ಅವರಿಗೆ ದೇಶದ ಹಾಗೂ ಕಾರ್ಯಕರ್ತರ ಹಿತಕ್ಕಿಂತ ಕುಟುಂಬದ ಹಿತವೇ ಮುಖ್ಯವಾಗಿದೆ. ಯಡಿಯೂರಪ್ಪ ಆಪ್ತರಿಗೆ ಕಾರ್ಯಕರ್ತರ ವಿರೋಧ ಇದ್ದರೂ ಟಿಕೆಟು ಸಿಗುತ್ತದೆ. ಪಕ್ಷಕ್ಕಾಗಿ, ಹಿಂದುತ್ವಕ್ಕಾಗಿ ಹೋರಾಟ ಮಾಡಿದವರನ್ನು ಮೂಲೆಗುಂಪು ಮಾಡಲಾಗುತ್ತದೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡದೆ ಕುಟುಂಬ ರಾಜಕಾರಣವನ್ನು ಮುಂದುವರಿಸುವ ಪರಿಪಾಠ ಅಪಾಯಕಾರಿಯಾದುದು ಈ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿಯರ ಕೈ ಬಲ ಪಡಿಸುತ್ತೇನೆ ಎಂದರು.
ಹಲವು ದಶಕಗಳಿಂದ ಹಿಂದುತ್ವದ ಪರವಾಗಿ ಹೋರಾಟ ಮಾಡಿ, ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದ ನನಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಲಕ್ಷಾಂತರ ಮಂದಿ ಕಾರ್ಯಕರ್ತರು ಕೂಡಾ ವು ಅನುಭವಿಸುತ್ತಿದ್ದಾರೆ. ವಿಧಿ ಇಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಶಿವಮೊಗ್ಗದಲ್ಲಿ ಎಪ್ರಿಲ್ 12ರಂದು ನಾಮಪತ್ರಲ್ಲಿಕೆ ಮಾಡಲಿದ್ದೇನೆ. ಆ ದಿನ 20 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಎ.19ರಂದು ನನ್ನ ಚಿಹ್ನೆ ಲಭಿಸಲಿದ್ದು, ಪಕ್ಷಭೇದ ಮರೆತು ಬೆಂಬಲಿಸುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮ ಸಂಚಾಲಕ ಶ್ರೀಧರ ಬಿಜೂರು ಮಾತನಾಡಿ ಬಿಜೆಪಿ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದೆ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಕಾರಣ. ಹಿಂದುಳಿದ ವರ್ಗದವರಿಗೆ ಒತ್ತು ನೀಡಿ ಅವರನ್ನು ನಾಯಕರನ್ನಾಗಿಸುವುದು ಯಾರಿಗೂ ಇಷ್ಟವಿಲ್ಲ. ನಾಯಕರ ಜೊತೆ ಗುರುತಿಸಿಕೊಂಡ ನಾಲ್ಕಾರು ಮಂದಿಗಷ್ಟೇ ಅವಕಾಶ ಸಿಗುತ್ತಿದೆ. ಸಾವಿರಾರು ಕೋಟಿ ಅನುದಾನಗಳು ಇವತ್ತು ನೇರ ಎಜೆನ್ಸಿಗಳ ಮೂಲಕ ಹೋಗುತ್ತಿದೆ. ಮರವಂತೆ ರೀನುಗಾರರ ಸಮಸ್ಯೆಗೆ ಸ್ಪಂದಿಸುವ ಕೆಲಸ ಆಗಿಲ್ಲ. ಗಂಗೊಳ್ಳಿ ಮೀನುಗಾರಿಕಾ ಜಟ್ಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡಲು ಆಗುತ್ತದೆ, ಆದರೆ ಮರವಂತೆಯಲ್ಲಿ 5-6 ಕೋಟಿ ನಷ್ಟ ೦ಭವಿಸಿದಾಗ ಒ೦ದು ಪೈಸೆಯ ಪರಿಹಾರ ಕೊಡಲು ಅಂದು ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲವೇ? ಮೂರು ಚುನಾವಣೆಯಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದೇವೆ. ಈ ಬಾರಿ ಮೋದಿ ಪೋಟೋ ಬಿಟ್ಟು ಬರಲಿ ಎಂದರು.
ತಾ.ಪಂ.ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಯಶವ೦ತ ಗ೦ಗೊಳ್ಳಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುವರ್ಣ ಪೂಜಾರಿ, ಗಣೇಶ ರಾವ್, ಗೋಪಾಲ ಗಾಣಿಗ, ಮಂಜುನಾಥ ರಾವ್, ವಿನಯ ನಾಯರಿ, ಪ್ರದೀಪ ಮೊದಲಾದವರು ಉಪಸ್ಥಿತರಿದ್ದರು.