Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧನಸಹಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿ ಗ್ರಾಮದ ದುರ್ಗಿಕೇರಿ ಪ್ರದೇಶದಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 2.5 ಲಕ್ಷ ರೂ. ದೇಣಿಗೆ ಮಂಜೂರು ಮಾಡಿದ್ದಾರೆ.

ಸಹಾಯಧನದ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ಸೇವಾ ಟ್ರಸ್ಟ್ನ ಪ್ರಮುಖರಿಗೆ ಗುರುವಾರ ಹಸ್ತಾಂತರಿಸಿದರು.

ಯೋಜನೆಯ ತ್ರಾಸಿ ವಲಯ ಮೇಲ್ವಿಚಾರಕ ಚಂದ್ರು, ವೀರೇಶ್ವರ ಸೇವಾ ಟ್ರಸ್ಟಿನ ಅಧ್ಯಕ್ಷ ಅಕ್ಷಯ್, ಉಪಾಧ್ಯಕ್ಷ ವಿವೇಕ್ ಬಿ., ಗುತ್ತಿಗೆದಾರ ರಾಜೇಂದ್ರ ಶೇರುಗಾರ್, ಕಾರ್ತಿಕ್, ರಾಘವೇಂದ್ರ ಗಾಣಿಗ, ಯಶವಂತ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಅನಿಲ್, ಪ್ರೀತೇಶ್, ವಿಘ್ನೇಶ್, ದಿಲೀಪ್, ಚೇತನ್ ಮತ್ತಿತರರು ಉಪಸ್ಥಿತರಿದ್ದರು.

ಗಂಗೊಳ್ಳಿ ಗ್ರಾಮದ ದುರ್ಗಿಕೇರಿ ಸಾರ್ವಜನಿಕ ಹಿಂದೂ ರುದ್ರಭೂಮಿ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಕಳೆದ ಒಂದು ವಾರದ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಸಹಾಯಧನ ಕೋರಿ ಶ್ರೀ ವೀರೇಶ್ವರ ಸೇವಾ ಟ್ರಸ್ಟ್ನ ಪದಾಧಿಕಾರಿಗಳುಮನವಿ ಸಲ್ಲಿಸಲಾಗತ್ತು. ಮನವಿಗೆ ತ್ವರಿತವಾಗಿ ಸ್ಪಂದಿಸಿದ ಧರ್ಮಾಧಿಕಾರಿಗಳು ಎರಡುವರೆ ಲಕ್ಷ ರೂ. ಸಹಾಯಧನವನ್ನು ಮಂಜೂರು ಮಾಡಿದ್ದಾರೆ.

ಶ್ರೀ ಕ್ಷೇತ್ರದಿಂದ ಬಂದ ಸಹಾಯಧನವನ್ನು ಸಿಲಿಕಾನ್ ಛೇಂಬರ್ ಅಳವಡಿಕೆ, ರುದ್ರಭೂಮಿಯಲ್ಲಿ ಶಿವನ ಮೂರ್ತಿ ನಿರ್ಮಾಣ ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗ ಮಾಡಲಾಗುವುದು ಎಂದು ಟ್ರಸ್ಟ್‌ನ ಪ್ರಮುಖ ನವೀನ್ ಗಂಗೊಳ್ಳಿ ತಿಳಿಸಿದ್ದಾರೆ.

Exit mobile version