Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಣಿ : ತೆನೆಕೊಯ್ಲು ಸ್ಪರ್ಧೆ ಬಹುಮಾನ ವಿತರಣೆ

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಅ.೩೧ರಂದು ಕೋಣಿಯ ಎಚ್.ಎಂ.ಟಿ ರಸ್ತೆ ಬಳಿಯ ಕೃಷಿಭೂಮಿಯಲ್ಲಿ ಸ್ಥಳೀಯ ಮಹಿಳೆಯರು ಮತ್ತು ಆನ್ಸ್ ಕ್ಲಬ್ ಕುಂದಾಪುರದ ಸದಸ್ಯರಿಗೆ ತೆನೆಕೊಯ್ಲು ಸ್ಪರ್ಧೆ ನಡೆಯಿತು.

ಕೋಣಿಯ ಎಚ್‌ಎಂಟಿ ರಸ್ತೆ ನಿವಾಸಿ ಮುತ್ತು ಪೂಜಾರ‍್ತಿ ತೆನೆಕೊಯ್ಲು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು. ಕಾಳಮ್ಮ ಪೂಜಾರ‍್ತಿ ದ್ವಿತಿಯ ಸ್ಥಾನ ಹಾಗೂ ಶಾರದ ಪೂಜಾರಿ ತೃತೀಯ ಸ್ಥಾನ ಪಡೆದುಕೊಂಡರು. ಆನ್ಸ್ ಸದಸ್ಯರಿಗೆ ನಡೆದ ಸ್ಪರ್ಧೆಯಲ್ಲಿ ಭಾರತಿ ಪ್ರಕಾಶ್ಚಂದ್ರ ಶೆಟ್ಟಿ ಪ್ರಥಮ ಸ್ಥಾನ, ಗೀತಾ ಟಿ. ಬಿ. ಶೆಟ್ಟಿ ದ್ವಿತೀಯ ಸ್ಥಾನ, ಸಾವಿತ್ರಿ ಕನ್ನಂತ ತೃತೀಯ ಸ್ಥಾನ ಪಡೆದುಕೊಂಡರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಸದಸ್ಯರಾದ ಮುತ್ತಯ್ಯ ಶೆಟ್ಟಿ, ವೆಂಕಟಾಚಲ ಕನ್ನಂತ, ಶ್ರೀಮತಿ ಉಷಾ ಮುತ್ತಯ್ಯ ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಚಂದ್ರ ಗಾಣಿಗ ಸಹಕರಿಸಿದರು.

Exit mobile version