Kundapra.com ಕುಂದಾಪ್ರ ಡಾಟ್ ಕಾಂ

ರಂಗ ಸುರಭಿ  – ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು:
ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾಗಿರುವ ರಂಗಸುರಭಿ -2024 ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವಕ್ಕೆ ಬೈಂದೂರು ಶಾರದಾ ವೇದಿಕೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಸ್ಥಾನದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವಾಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಕಲೆ ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಳ್ಳುವುದು ಬಹುಮುಖ್ಯ. ಮನುಷ್ಯನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುವ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿಯೂ ಯಶಸ್ಸು ಕಾಣಲು ಸಾಧ್ಯವಿದೆ ಎಂದರು.

ಶಿರೂರು ಉದ್ಯಮಿ ರಾಮು ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಮರವಂತೆ ಚೇತನಾ ಚಿಕಿತ್ಸಾಲಯದ ಡಾ. ರೂಪಾಶ್ರೀ ಮರವಂತೆ, ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ರಂಗಕಲಾವಿದ, ನಾಗೂರು ಸಂದೀಪನ್ ಶಾಲೆಯ ಮುಖ್ಯ ಶಿಕ್ಷಕರಾದ ವಿಶ್ವೇಶ್ವರ ಅಡಿಗ ಬಿಜೂರು ಅವರನ್ನು ಸನ್ಮಾನಿಸಲಾಯಿತು.

ಸುರಭಿ ಉಪಾಧ್ಯಕ್ಷ ಆನಂದ ಮದ್ದೋಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷ ನಾಗರಾಜ ಪಿ ಯಡ್ತರೆ ಸ್ವಾಗತಿಸಿ, ನಿರ್ದೇಶಕ ಸುಧಾಕರ ಪಿ ಬೈಂದೂರು ವಂದಿಸಿದರು. ಪೂರ್ಣಿಮಾ ಆಚಾರ್ ಪ್ರಾರ್ಥಿಸಿ, ರಾಮಕೃಷ್ಣ ದೇವಾಡಿಗ ನಿರೂಪಣೆ ಮಾಡಿದರು.

ಬಳಿಕ ಅಸ್ಥಿತ್ವ ಮಂಗಳೂರು ಅಭಿಯಾನದ, ವೈಕಂ ಮಹಮ್ಮದ ಬಶೀರ್ ಅವರ ಕಥೆ ಹಾಗೂ ಸುನೈಫ್ ವಿಟ್ಲ ಅನುವಾದಿಸಿ, ಅರುಣ್ ಲಾಲ್ ಕೇರಳ ವರು ನಿರ್ದೇಶಿಸಿರುವ ಜುಗಾರಿ ನಾಟಕ ಪ್ರರ್ದಶನಗೊಳಿಸಿದರು.

Exit mobile version