ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2023-24 ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರದ ಎಕ್ಸಲೆಂಟ್ ಪ.ಪೂ. ಕಾಲೇಜಿಗೆ ರಾಜ್ಯಮಟ್ಟದಲ್ಲಿ 13 ಸ್ಥಾನಗಳು ಬಂದಿದ್ದು, ಶೇ.100 ಫಲಿತಾಂಶ ಲಭಿಸಿದೆ. ಅತೀ ಹೆಚ್ಚು ರ್ಯಾಂಕ್ಗಳನ್ನು ಪಡೆದ ಕುಂದಾಪುರದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಸ್ಥೆಯಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು ಒಟ್ಟು 404 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.100 ಫಲಿತಾಂಶ ಬರುವುದರೊಂದಿಗೆ ವಿಜ್ಞಾನ ವಿಭಾಗದಲ್ಲಿ 08 ಸ್ಥಾನಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 05 ಸ್ಥಾನಗಳನ್ನು ರಾಜ್ಯಮಟ್ಟದಲ್ಲಿ ಗಳಿಸುವುದರ ಮೂಲಕ ಸಂಸ್ಥೆಯ ಕೀರ್ತಿ ಕಳಶಕ್ಕೆ ಇನ್ನು ಹೊಳಪು ನೀಡಿದ್ದಾರೆ.
ಸಂಸ್ಥೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಿರಾಗ್ 592 ಅಂಕಗಳೊAದಿಗೆ ರಾಜ್ಯಮಟ್ಟದಲ್ಲಿ 7 ನೇ ಸ್ಥಾನ, ಅನನ್ಯ ಉಡುಪ 590 ಅಂಕಗಳೊAದಿಗೆ 9 ನೇ ಸ್ಥಾನ, ನಾಗರಾಜ ಉಪ್ಪಾರ್ 590 ಅಂಕಗಳೊAದಿಗೆ 9 ನೇ ಸ್ಥಾನ, ರಕ್ಷಾ ಆರ್ ಪೂಜಾರಿ 590 ಅಂಕಗಳೊAದಿಗೆ 9 ನೇ ಸ್ಥಾನ, ನಿಶಾ 589 ಅಂಕಗಳೊAದಿಗೆ 10 ನೇ ಸ್ಥಾನ, ನಿರ್ಮಿತಾ ಎನ್. ಡಿ 588 ಅಂಕಗಳೊAದಿಗೆ 11 ನೇ ಸ್ಥಾನ, ವಿನುತಾ 588 ಅಂಕಗಳೊAದಿಗೆ 11 ನೇ ಸ್ಥಾನ, ಸನ್ನಿದಿ ಕುಲಾಲ್ 588 ಅಂಕಗಳೊAದಿಗೆ 11 ನೇ ಸ್ಥಾನ, ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 315 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇಕಡ 100 ಫಲಿತಾಂಶ ಬಂದಿದೆ 246 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ರಿತನ್ಯ ನಾಯ್ಕ 591 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 7 ನೇ ಸ್ಥಾನ , ಹರ್ಷಿತಾ ಡಿ. ಎಸ್ 591 ಅಂಕಗಳೊAದಿಗೆ 7 ನೇ ಸ್ಥಾನ , ಸಿಂಚನಾ ಎಸ್ ಬಸ್ರೂರು 589 ಅಂಕಗಳೊAದಿಗೆ 9 ನೇ ಸ್ಥಾನ, ಸಿಂಚನಾ ಎಸ್ ಶೆಟ್ಟಿ 589 ಅಂಕಗಳೊAದಿಗೆ 9 ನೇ ಸ್ಥಾನ, ಭೂಮಿಕಾ 588 ಅಂಕಗಳೊAದಿಗೆ 10 ನೇ ಸ್ಥಾನಗಳನ್ನು ಪಡೆಯುದರ ಮೂಲಕ ಅತ್ಯುತ್ಕೃಷ್ಟ ಸಾಧನೆ ಮಾಡಿ ಸಂಸ್ಥೆಯ ಪ್ರತಿಷ್ಟೆಗೆ ಇನ್ನೂ ಮೆರುಗು ನೀಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 89 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇಕಡ 100 ಫಲಿತಾಂಶ ಬಂದಿದೆ. 62 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ರಾಜ್ಯಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎಂ.ಎಂ. ಹೆಗ್ಡೆ ಎಜುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಎಂ ಮಹೇಶ್ ಹೆಗ್ಡೆ, ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಉಪನ್ಯಾಸಕರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.